ಇರಾನ್ ಸೇನಾಧಿಕಾರಿ ಸುಲೈಮಾನಿ ಹತ್ಯೆಯಲ್ಲಿ ಇಸ್ರೇಲ್ ಪಾತ್ರ ದೃಢಪಡಿಸಿದ ಮಾಜಿ ಗುಪ್ತಚರ ಮುಖ್ಯಸ್ಥ

Update: 2021-12-21 16:27 GMT
ಖಾಸಿಂ ಸುಲೈಮಾನಿ(photo:PTI) 

ಜೆರುಸಲೇಂ, ಡಿ.21: ಜನವರಿ 2020ರಲ್ಲಿ ಅಮೆರಿಕದ ವಾಯುದಾಳಿಯಲ್ಲಿ ಇರಾನ್‌ನ ಸೇನಾಧಿಕಾರಿ ಜನರಲ್ ಖಾಸಿಂ ಸುಲೈಮಾನಿ  ಹತ್ಯೆ ಪ್ರಕರಣದಲ್ಲಿ ಇಸ್ರೇಲ್‌ನ ಪಾತ್ರವಿತ್ತು ಎಂದು ಇಸ್ರೇಲ್ ಸೇನಾ ಗುಪ್ತಚರ ವಿಭಾಗದ ನಿವೃತ್ತ ಮುಖ್ಯಸ್ಥರು ದ್ಥಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ನ ರೆವೊಲ್ಯುಷನರಿ ಗಾರ್ಡ್ಸ್‌ನ ಕುದ್ಸ್  ಪಡೆಯ ಮುಖ್ಯಸ್ಥರಾಗಿದ್ದ ಸುಲೈಮಾನಿ, ವಿದೇಶದಲ್ಲಿ ಅರೆಸೈನಿಕ ಪಡೆಗಳೊಂದಿಗೆ ಇರಾನ್‌ನ ಪಾಲ್ಗೊಳ್ಳುವಿಕೆಗೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ನೆರವಾಗುತ್ತಿದ್ದರು. 2020ರಲ್ಲಿ ಬಗ್ದಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಅವರು ಮೃತಪಟ್ಟಿದ್ದರು. ದಮಾಸ್ಕಸ್‌ನಿಂದ ಬಗ್ದಾದ್‌ಗೆ ಸುಲೈಮಾನಿ ಪ್ರಯಾಣಿಸಿದ್ದ ವಿಮಾನದ ಬಗ್ಗೆ ಇಸ್ರೇಲ್ ಗುಪ್ತಚರ ದಳ ಮಾಹಿತಿ ನೀಡಿತ್ತು ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿತ್ತು.

ಇದೀಗ ಈ ವರದಿಯನ್ನು ಇಸ್ರೇಲ್‌ನ ನಿವೃತ್ತ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ತಾಮಿರ್ ಹೆಮ್ಯಾನ್ ದೃಢಪಡಿಸಿದ್ದಾರೆ. ‘ ನನ್ನ ದೃಷ್ಟಿಯಲ್ಲಿ ನಮ್ಮ ಪ್ರಮುಖ ವೈರಿ ಇರಾನ್. ಆದ್ದರಿಂದ ಸೊಲೈಮಾನಿ ಹತ್ಯೆ ಒಂದು ಪ್ರಮುಖ ಸಾಧನೆಯಾಗಿದೆ. ಗುಪ್ತಚರ ಮುಖ್ಯಸ್ಥನಾಗಿ ನನ್ನ ಅವಧಿಯಲ್ಲಿ 2 ಪ್ರಮುಖ ಹತ್ಯೆಯಾಗಿದೆ. ಇದರಲ್ಲಿ ಮೊದಲನೆಯದ್ದು ಸುಲೈಮಾನಿಯ ಹತ್ಯೆ. ನೆರೆಯ ಸಿರಿಯಾದಲ್ಲಿ ಇರಾನ್‌ನ ಹಸ್ತಕ್ಷೇಪ ಪ್ರಕ್ರಿಯೆಯ ಚಾಲಕ ಶಕ್ತಿ ಆಗಿದ್ದವರು ಸುಲೈಮಾನಿ ಎಂದು  ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News