ಅಜಯ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪ್ರಧಾನಿ ವಿಫಲ: ರಾಹುಲ್ ಗಾಂಧಿ

Update: 2021-12-21 17:14 GMT

ಹೊಸದಿಲ್ಲಿ, ಡಿ. 21: ಲಖಿಂಪುರಖೇರಿ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ತೇನಿ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಅವರು ಸಚಿವರ (ಅಜಯ್ ಮಿಶ್ರಾ) ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾಧ್ಯಮ ಕೂಡ ತನ್ನ ಕೆಲಸ ಮಾಡುತ್ತಿಲ್ಲ, ಪ್ರಧಾನಿ ಅವರು ಕೂಡ ತನ್ನ ಕೆಲಸ ಮಾಡುತ್ತಿಲ್ಲ ಎಂದು ಅವರು ಹೇಳಿದರು. ‘‘ನಾವು ಈ ವಿಷಯವನ್ನು ಮತ್ತೆ ಮತ್ತೆ ಎತ್ತಿದ್ದೇವೆ. ಆದರೆ, ಸರಕಾರ ಆಲಿಸುತ್ತಿಲ್ಲ. ಭಾರತದ ಜನರ ವಿರುದ್ಧದ ಸರಕಾರದ ನಿರ್ಲಕ್ಷವನ್ನು ನಾವು ಸಹಿಸಲಾರೆವು. ಇಂದು ಅಥವಾ ನಾಳೆ, ನಾವು ಅವರನ್ನು ಸುಮ್ಮನೆ ಬಿಡಲಾರೆವು. ಅವರನ್ನು ಜೈಲಿಗೆ ಕಳುಹಿಸುವೆವು ’’ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News