×
Ad

ಗುಂಪು ಥಳಿತ, ಹಿಂಸೆ ಪ್ರಕರಣಗಳ ತಡೆಗೆ ಮಸೂದೆ ಅಂಗೀಕರಿಸಿದ ಜಾರ್ಖಂಡ್ ವಿಧಾನಸಭೆ

Update: 2021-12-22 16:12 IST

ರಾಂಚಿ: ಜಾರ್ಖಂಡ್ ವಿಧಾನಸಭೆಯು ರಾಜ್ಯದಲ್ಲಿ ಗುಂಪು ಹಿಂಸೆ ಮತ್ತು ಗುಂಪು ಥಳಿತ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ  ಹೊಸ ಮಸೂದೆಗೆ ಮಂಗಳವಾರ ಅಂಗೀಕಾರ ನೀಡಿದೆ. ಗುಂಪು ಹಿಂಸೆ ಮತ್ತು ಗುಂಪು ಥಳಿತ ತಡೆ ಮಸೂದೆ, 2021 ಎಂಬ ಹೆಸರಿನ ಈ ಮಸೂದೆಯನ್ನು ಸದನದಲ್ಲಿ ಕಾಂಗ್ರೆಸ್ ನಾಯಕ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಆಲಂಗೀರ್ ಆಲಂ ಮಂಡಿಸಿದರು.

ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಾಗ ಇಂತಹ ಒಂದು ಕಾನೂನನ್ನು ಜಾರಿಗೊಳಿಸಿದ ದೇಶದ ನಾಲ್ಕನೇ ರಾಜ್ಯ ಜಾರ್ಖಂಡ್ ಆಗಲಿದೆ. ಈಗಾಗಲೇ ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಣಿಪುರದಲ್ಲಿ ಇಂತಹ ಕಾನೂನುಗಳು ಜಾರಿಯಾಗಿವೆ.

ಜಾರ್ಖಂಡ್‍ನ ಪ್ರಸ್ತಾವಿತ ಕಾನೂನಿನನ್ವಯ  ಆಯಾ ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಹಾಗೂ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿ ಗುಂಪು ಥಳಿತ ಹಾಗೂ ಹಿಂಸಾಚಾರ ಪ್ರಕರಣಗಳನ್ನು ನಿಯಂತ್ರಿಸುವ ಅಧಿಕಾರವಿರಲಿದೆ. ತಪ್ಪಿತಸ್ಥ ಎಂದು ಘೋಷಿತರಾದವರಿಗೆ ರೂ 3 ಲಕ್ಷದಿಂದ ರೂ 5 ಲಕ್ಷವರೆಗೆ ದಂಡ ಹಾಗೂ ಎರಡು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ರಾಜ್ಯದ ಸಿಪಿಐ (ಮಾಕ್ರ್ಸಿಸ್ಟ್-ಲೆನಿನಿಸ್ಟ್) ಶಾಸಕ ವಿನೋದ್ ಸಿಂಗ್ ಈ ಮಸೂದೆಗೆ ಬೆಂಬಲ ಸೂಚಿಸಿದರೆ, ಈ ಮಸೂದೆ ಓಲೈಕೆ ರಾಜಕಾರಣವಲ್ಲದೆ ಮತ್ತಿನ್ನೇನಲ್ಲ ಎಂದು ಅದನ್ನು ಬಿಜೆಪಿ ಶಾಸಕ ಅಮರ್ ಬೌರಿ ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News