ಕೇರಳ: ಡಿಸೆಂಬರ್ 30ರಿಂದ 4 ದಿನ ರಾತ್ರಿ ಕರ್ಫ್ಯೂ

Update: 2021-12-27 17:01 GMT

ತಿರುವನಂತಪುರ, ಡಿ. 27: ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ರಾಜ್ಯಾದ್ಯಂತ ಡಿಸೆಂಬರ್ 30ರಿಂದ 2022 ಜನವರಿ 2ರ ವರೆಗೆ ರಾತ್ರಿ ಕರ್ಫ್ಯೂ ಘೋಷಿಸಿದೆ. ಕರ್ಫ್ಯೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ಜಾರಿಯಲ್ಲಿರಲಿದೆ. ‌

ಅಂಗಡಿ ಹಾಗೂ ಮುಂಗಟ್ಟುಗಳನ್ನು ರಾತ್ರಿ 10 ಗಂಟೆಗಳ ಒಳಗೆ ಮುಚ್ಚಲು ಸೂಚಿಸಲಾಗಿದೆ. ಅನಗತ್ಯ ಪ್ರಯಾಣ ಹಾಗೂ ಕಾರಣವಿಲ್ಲದೆ ಸಾರ್ವಜನಿಕವಾಗಿ ಸೇರದಂತೆ ನಾಗರಿಕರಿಗೆ ತಿಳಿಸಲಾಗಿದೆ. ಒಮೈಕ್ರಾನ್ ಡೆಲ್ಟಾಕ್ಕಿಂತ ಮೂರು ಪಟ್ಟು ಸಾಂಕ್ರಾಮಿಕವಾದುದು ಎಂದು ಪ್ರತಿಪಾದಿಸಿರುವ ಕೇಂದ್ರ ಸರಕಾರ, ಸಣ್ಣ ಬದಲಾವಣೆ, ಪ್ರಕರಣಗಳ ಏರಿಕೆಯನ್ನು ಕೂಡ ವಿಶ್ಲೇಷಿಸಲು ಸಕ್ರಿಯ ವಾರ್ ರೂಮ್ಗಳು, ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ ಕಠಿಣ ಹಾಗೂ ಕ್ಷಿಪ್ರ ಕಂಟೈನ್ಮೆಂಟ್ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕಳೆದ ವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿತ್ತು. 

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪರೀಕ್ಷೆ ಹಾಗೂ ಕಣ್ಗಾವಲು ಅಲ್ಲದೆ, ರಾತ್ರಿ ಕರ್ಫ್ಯೂ ಹೇರಿಕೆ, ದೊಡ್ಡ ಸಭೆಗೆ ಕಠಿಣ ನಿಯಂತ್ರಣ, ವಿವಾಹಗಳು ಹಾಗೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯನ್ನು ಮೊಟಕುಗಳಿಸುವಂತಹ ಕಂಟೈನ್ಮೆಂಟ್ ಕ್ರಮಕ್ಕಾಗಿ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News