ಭಾರತದಲ್ಲಿ 24 ಗಂಟೆಗಳಲ್ಲಿ ವಿದೇಶಿ ಫಂಡಿಂಗ್ ಪರವಾನಗಿ ಕಳೆದುಕೊಂಡ 6,000 ಎನ್‌ಜಿಒಗಳು

Update: 2022-01-01 09:38 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ: ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ ದಿನಗಳ ನಂತರ 6,000 ಕ್ಕೂ ಹೆಚ್ಚು ಎನ್‌ಜಿಒಗಳ ವಿದೇಶದಿಂದ ದತ್ತಿ ಕೊಡುಗೆಗಳನ್ನು ಸ್ವೀಕರಿಸಲು ಅಗತ್ಯವಿರುವ ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಪರವಾನಗಿಗಳ ಅವಧಿ ರಾತ್ರೋರಾತ್ರಿ ಮುಗಿದಿದೆ ಎಂದು ಗೃಹ ಸಚಿವಾಲಯ ಶನಿವಾರ ಬೆಳಿಗ್ಗೆ ಹೇಳಿದೆ ಎಂದು NDTV ವರದಿ ಮಾಡಿದೆ.

ಪರವಾನಗಿ ಅವಧಿ ಮುಗಿದಿರುವ ಎಲ್ಲಾ ಎನ್‌ಜಿಒಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಅಥವಾ ಕೇಂದ್ರ ಗೃಹ ಸಚಿವಾಲಯವು ಎನ್‌ಜಿಒಗಳ  ಅರ್ಜಿಗಳನ್ನು ತಿರಸ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಡಿಸೆಂಬರ್ 31 ರ ಮೊದಲು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಎಲ್ಲಾ ಎನ್‌ಜಿಒಗಳಿಗೆ  ಜ್ಞಾಪನೆಗಳನ್ನು ಕಳುಹಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಆದರೆ ಅನೇಕರು ಹಾಗೆ ಮಾಡಿಲ್ಲ. ಅನುಮತಿ ನೀಡುವುದು ಹೇಗೆ...ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಆಕ್ಸ್‌ಫ್ಯಾಮ್ ಇಂಡಿಯಾ ಟ್ರಸ್ಟ್, ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಲೆಪ್ರಸಿ ಮಿಷನ್, ಕ್ಷಯರೋಗ ಅಸೋಸಿಯೇಷನ್ ಆಫ್ ಇಂಡಿಯಾ, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಹಾಗೂ  ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಸೇರಿದಂತೆ 6,000 ಕ್ಕೂ ಹೆಚ್ಚು ಎನ್‌ಜಿಒಗಳು ಇಂದಿನಿಂದ ತಮ್ಮ ಎಫ್‌ಸಿಆರ್‌ಎ ಪರವಾನಗಿಗಳನ್ನು ಕಳೆದುಕೊಂಡಿವೆ.

ಯಾವುದೇ ಅಸೋಸಿಯೇಶನ್ ಹಾಗೂ  ಎನ್‌ಜಿಒ ವಿದೇಶಿ ನಿಧಿಯನ್ನು ಸ್ವೀಕರಿಸಲು ಎಫ್‌ಸಿಆರ್‌ಎ ನೋಂದಣಿ ಕಡ್ಡಾಯವಾಗಿದೆ. ಶುಕ್ರವಾರದವರೆಗೆ 22,762 ಎಫ್‌ಸಿಆರ್‌ಎ-ನೋಂದಾಯಿತ ಎನ್‌ಜಿಒಗಳಿದ್ದವು. ಶನಿವಾರ 5,933 ಎನ್‌ಜಿಒಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಭಾರತದಲ್ಲಿ ಈಗ ಕೇವಲ 16,829 ಎನ್‌ಜಿಒಗಳು ಎಫ್‌ಸಿಆರ್‌ಎ ಪರವಾನಗಿಯನ್ನು ಹೊಂದಿವೆ.  ಅದನ್ನು ಡಿ.31, 2021ರಿಂದ ಮಾರ್ಚ್ 31, 2022 ರವರೆಗೆ ನವೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News