×
Ad

2020-21ರಲ್ಲಿ ತತ್ಕಾಲ್, ಪ್ರೀಮಿಯಂ ತತ್ಕಾಲ್ ಟಿಕೆಟ್ ನಿಂದ ರೈಲ್ವೆ 500 ಕೋ. ರೂ. ಗಳಿಕೆ

Update: 2022-01-02 22:55 IST

ಹೊಸದಿಲ್ಲಿ, ಜ.2: 2020-21ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೆಚ್ಚಿನ ರೈಲು ಸೇವೆಗಳು ರದ್ದುಗೊಂಡಿರುವ ಹೊರತಾಗಿಯೂ ತತ್ಕಾಲ್ ಟಿಕೆಟ್ ಶುಲ್ಕದಿಂದ ರೈಲ್ವೆ 403 ಕೋ. ರೂ. ಗಳಿಸಿದೆ. ಪ್ರಿಮಿಯಂ ತತ್ಕಾಲ್ ಟಿಕೆಟ್ ಶುಲ್ಕದಿಂದ 119 ಕೋ. ರೂ. ಹಾಗೂ ಡೈನಮಿಕ್ ಟಿಕೆಟ್ ಶುಲ್ಕದಿಂದ 511 ಕೋ. ರೂ. ಗಳಿಸಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಲಭ್ಯವಾದ ಮಾಹಿತಿಯಿಂದ ಬಹಿರಂಗಗೊಂಡಿದೆ. ‌

ಈ ಮೂರು ವರ್ಗಗಳಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಕೊನೆಯ ನಿಮಿಷದ ಪ್ರಯಾಣಿಕರಾಗಿದ್ದು, ತುರ್ತು ಪ್ರಯಾಣಕ್ಕಾಗಿ ಹೆಚ್ಚು ಶುಲ್ಕ ಪಾವತಿಸುವ ಮೂಲಕ ಸೇವೆ ಪಡೆಯುತ್ತಾರೆ. ಮಧ್ಯಪ್ರದೇಶ ಮೂಲದ ಚಂದ್ರ ಶೇಖರ ಗೌರ್ ಅವರು ಸಲ್ಲಿಸಿದ ಆರ್ಟಿಐಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ, 2021-22ರ ಸೆಪ್ಟಂಬರ್ ವರೆಗಿನ ವಿತ್ತ ವರ್ಷದಲ್ಲಿ ಡೈನಾಮಿಕ್ ಶುಲ್ಕದಿಂದ 240 ಕೋ.ರೂ., ತತ್ಕಾಲ್ ಟಿಕೇಟ್ ಶುಲ್ಕದಿಂದ 353 ಕೋ. ರೂ., ಪ್ರಿಮಿಯಂ ತತ್ಕಾಲ್ ಶುಲ್ಕದಿಂದ 89 ಕೋ. ರೂ. ಗಳಿಸಿದೆ ಎಂದು ಹೇಳಿದೆ. 

ರೈಲು ಸೇವೆಗೆ ಯಾವುದೇ ನಿರ್ಬಂಧ ಇಲ್ಲದ 2019-20 ವಿತ್ತ ವರ್ಷದಲ್ಲಿ ರೈಲ್ವೇ ಡೈನಮಿಕ್ ಟಿಕೆಟ್ ಶುಲ್ಕದಿಂದ 1,313, ತತ್ಕಾಲ್ ಟಿಕೆಟ್ ಶುಲ್ಕದಿಂದ 1,669 ಹಾಗೂ ಪ್ರಿಮಿಯಂ ತತ್ಕಾಲ್ ಟಿಕೆಟ್ ಶುಲ್ಕದಿಂದ 603 ಕೋ. ರೂ. ಗಳಿಸಿತ್ತು ಎಂದು ರೈಲ್ವೆ ಹೇಳಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News