ಎಲಾನ್‌ ಮಸ್ಕ್‌ ರ ಟೆಸ್ಲಾ ಆಟೋಪೈಲಟ್‌ ತಂಡದ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಶೋಕ್‌ ಎಲ್ಲುಸ್ವಾಮಿ ಆಯ್ಕೆ

Update: 2022-01-02 17:53 GMT
Photo: Tesla

ನ್ಯೂಯಾರ್ಕ್:‌ ಉದ್ಯೋಗಿಗಳನ್ನು ನೇಮಿಸಲು ಸಾಮಾಜಿಕ ಜಾಲತಾಣವನ್ನು ಬಳಸುತ್ತಿರುವ ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲಾನ್ ಮಸ್ಕ್, ಭಾರತೀಯ ಮೂಲದ ಅಶೋಕ್ ಎಲ್ಲುಸ್ವಾಮಿ ತಮ್ಮ ಎಲೆಕ್ಟ್ರಿಕ್ ವಾಹನ ಕಂಪನಿಯ ಆಟೋಪೈಲಟ್ ತಂಡಕ್ಕೆ ಸಾಮಾಜಿಕ ಮಾಧ್ಯಮದ ಮೂಲಕ ನೇಮಕಗೊಂಡಿರುವ ಮೊದಲ ಉದ್ಯೋಗಿ ಎಂದು ಮಾಹಿತಿ ಹಂಚಿದ್ದಾರೆ.

ನನ್ನ ಟ್ವೀಟ್‌ನಿಂದ ನೇಮಕಗೊಂಡ ಮೊದಲ ವ್ಯಕ್ತಿ ಅಶೋಕ್‌ ಎಂದು ತಿಳಿಸಿರುವ ಎಲಾನ್‌, ಈ ತಂಡಕ್ಕೆ ಅಶೋಕ್‌ ಅವರೇ ಮುಖ್ಯಸ್ಥರಾಗಿರಲಿದ್ದಾರೆ ಎಂದೂ ತಿಳಿಸಿದ್ದಾರೆ.  ಟೆಸ್ಲಾ ಸಂಸ್ಥೆಗೆ ಸೇರುವ ಮೊದಲು ಅಶೋಕ್‌ ಫಾಕ್ಸ್‌ವೇಗನ್‌ ಎಲೆಕ್ಟ್ರಾನಿಕ್‌ ರೀಸರ್ಚ್ ಹಾಗೂ WABCO ವೆಹಿಕಲ್‌ ಕಂಟ್ರೋಲ್‌ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

ಅಶೋಕ್‌, ಚೆನ್ನೈನ ಕಾಲೇಜ್ ಆಫ್ ಇಂಜಿನಿಯರಿಂಗ್ ಗಿಂಡಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾರ್ನೆಜಿ ಮೆಲ್ಲನ್‌ (Carnegie Mellon University) ವಿಶ್ವವಿದ್ಯಾಲಯದಿಂದ ರೊಬೊಟಿಕ್ಸ್ ಸಿಸ್ಟಮ್ ಡೆವಲಪ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಕಾಳಜಿ ವಹಿಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಇಂಜಿನಿಯರ್‌ಗಳನ್ನು ಟೆಸ್ಲಾ ಹುಡುಕುತ್ತಿರುವುದಾಗಿ ಇತ್ತೀಚೆಗಷ್ಟೇ ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News