×
Ad

ಗಡಿ ದಾಟಿ ಉ.ಕೊರಿಯಾಕ್ಕೆ ಪಲಾಯನ ಮಾಡಿದ ವ್ಯಕ್ತಿ ದೇಶದ್ರೋಹಿ : ದ.ಕೊರಿಯಾ ಸ್ಪಷ್ಟನೆ

Update: 2022-01-03 22:48 IST
S Korean President Moon Jae-in(photo:twitter/@TheBlueHouseENG)
 

ಸಿಯೋಲ್, ಜ.3: ಜನವರಿ 1ರಂದು ದಕ್ಷಿಣ ಕೊರಿಯಾದ ಗಡಿಬೇಲಿಯ ಅಡಿಯಿಂದ ನುಸುಳಿ ಉತ್ತರಕೊರಿಯಾಕ್ಕೆ ಪರಾರಿಯಾದ ವ್ಯಕ್ತಿ 2020ರಲ್ಲಿ ಅದೇ ರೀತಿ ಉತ್ತರಕೊರಿಯಾದಿಂದ ತಮ್ಮ ದೇಶಕ್ಕೆ ನುಸುಳಿ ಬಂದಿದ್ದ ದೇಶದ್ರೋಹಿ ಆಗಿರುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಸೇನಾಪಡೆ ಹೇಳಿದೆ.

ಜನವರಿ 1ರಂದು ದಕ್ಷಿಣ ಕೊರಿಯಾ-ಉ.ಕೊರಿಯಾ ಗಡಿಭಾಗದ ಪೂರ್ವಭಾಗದಲ್ಲಿ ಅಳವಡಿಸಲಾದ ಮುಳ್ಳು ತಂತಿಯ ಬೇಲಿಯ ಅಡಿಯಿಂದ ಗುರುತಿಸಲಾಗದ ಓರ್ವ ವ್ಯಕ್ತಿ ನುಸುಳಿಕೊಂಡು ಉತ್ತರಕೊರಿಯಾಕ್ಕೆ ಪರಾರಿಯಾಗಿರುವುದು ಗಡಿ ಭಾಗದಲ್ಲಿರುವ ದಕ್ಷಿಣ ಕೊರಿಯಾದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವ್ಯಕ್ತಿ 2020ರ ಅಂತ್ಯಭಾಗದಲ್ಲಿ ಉತ್ತರಕೊರಿಯಾದಿಂದ ಗಡಿ ಬೇಲಿ ಮೂಲಕ ನುಸುಳಿಕೊಂಡು ದಕ್ಷಿಣ ಕೊರಿಯಾ ಪ್ರವೇಶಿಸಿರುವ ಮಾಹಿತಿ ದೊರಕಿದೆ. ಇದನ್ನು ದೃಢಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಇಲಾಖೆ ಸೋಮವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News