ದಕ್ಷಿಣ ಆಫ್ರಿಕಾ ಸಂಸತ್ ಬೆಂಕಿ ದುರಂತ ಪ್ರಕರಣ: ಓರ್ವನ ಮೇಲೆ ಶಂಕೆ
Update: 2022-01-03 22:58 IST
ಕೇಪ್‌ಟೌನ್, ಜ.2: ದಕ್ಷಿಣ ಆಫ್ರಿಕಾದ ಸಂಸತ್‌ಭವನದಲ್ಲಿ ರವಿವಾರ ವ್ಯಾಪಿಸಿದ್ದ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಓರ್ವ ವ್ಯಕ್ತಿಯನ್ನು ಶಂಕಿತ ಆರೋಪಿಯೆಂದು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ನ್ಯಾಷನಲ್ ಅಸೆಂಬ್ಲಿ ಸಭಾಂಗಣಕ್ಕೆ ತೀವ್ರ ಹಾನಿಯಾಗಿದ್ದು ಅದನ್ನು ಹಲವು ತಿಂಗಳವರೆಗೆ ಬಳಸಲಾಗದು. ಮರದಿಂದ ಮಾಡಿದ ಮಾಡು ಕುಸಿದು ಬಿದ್ದಿದ್ದು ಕೆಲವು ಕಡೆ ಇನ್ನೂ ಹೊಗೆ ಏಳುತ್ತಿದೆ. ಪಕ್ಕದಲ್ಲೇ ಇರುವ ಖಜಾನೆ ಇಲಾಖೆಯ ಕಚೇರಿಗೂ ಬೆಂಕಿ ಹರಡುವ ಅಪಾಯವಿತ್ತು. ಆದರೆ ಸಕಾಲಿಕ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಸಂಸತ್‌ಭವನದ ವಕ್ತಾರ ಜರ್ಮೈನ್ ಕ್ಯಾರೆಲ್ಸೆ ಹೇಳಿದ್ದಾರೆ.