×
Ad

ಪಾಕ್‌ನಿಂದ ಭಾರತಕ್ಕೆ 219 ಮಂದಿಯ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ ಭಾರತೀಯ ಹೈಕಮಿಷನ್

Update: 2022-01-03 23:03 IST
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್, ಜ.3: ಪಾಕಿಸ್ತಾನದಿಂದ ಭಾರತಕ್ಕೆ ಪ್ರಯಾಣಿಸಲು ಸೂಕ್ತ ವೀಸಾ ಹೊಂದಿರುವ 219 ಮಂದಿಯನ್ನು 2022ರ ಜನವರಿ 10ರಿಂದ 15ರ ಅವಧಿಯಲ್ಲಿ ಭಾರತಕ್ಕೆ ಮರಳಲು ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ 47 ಪ್ರಜೆಗಳು, ‘ನೋ ಆಬ್ಲಿಗೇಷನ್ ಟು ರಿಟರ್ನ್ ಟು ಇಂಡಿಯಾ (ನೋರಿ) ವೀಸಾ ಹೊಂದಿರುವ 15 ಮಂದಿಯನ್ನು, ಸೌದಿಯ 4, ನೇಪಾಳದ 7 ಮತ್ತು ಪಾಕಿಸ್ತಾನದ 146 ಪ್ರಜೆಗಳನ್ನು ಭಾರತಕ್ಕೆ ಮರಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

 ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ಜಾರಿಗೊಳಿಸುವ ಆರೋಗ್ಯ/ಕೊರೋನ ಸೋಂಕಿಗೆ ಸಂಬಂಧಿಸಿದ ನಿಯಮಾವಳಿಯನ್ನು ಪಾಲಿಸಿ ಮತ್ತು ವಲಸೆ ಸಂಬಂಧಿತ ಔಪಚಾರಿಕತೆಯನ್ನು ಪೂರ್ಣಗೊಳಿಸಿದ ಬಳಿಕ ಈ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕಮಿಷನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News