ಏರ್‌ ಇಂಡಿಯಾ ಖಾಸಗೀಕರಣದ ಒಪ್ಪಂದ ರದ್ದು ಕೋರಿ ದಿಲ್ಲಿ ಹೈಕೋರ್ಟ್‌ ಮೊರೆ ಹೋದ ಸುಬ್ರಮಣಿಯನ್‌ ಸ್ವಾಮಿ

Update: 2022-01-03 18:23 GMT

ಹೊಸದಿಲ್ಲಿ: ಏರ್‌ ಇಂಡಿಯಾದ ಹೂಡಿಕೆಯನ್ನು ಕೇಂದ್ರ ಸರ್ಕಾರವು ಹಿಂಪಡೆಯುವುದನ್ನು ರಾಷ್ಟ್ರೋದೋಹದ ಕೆಲಸವೆಂದಿದ್ದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಇದೀಗ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. 

ಏರ್‌ ಇಂಡಿಯಾದಿಂದ ಬಂಡವಾಳವನ್ನು ಹಿಂಪಡೆಯುವ ಒಪ್ಪಂದವನ್ನು ಅಮಾನತು ಮಾಡುವಂತೆ ದಿಲ್ಲಿ ಹೈಕೋರ್ಟಿನಲ್ಲಿ ಸ್ವಾಮಿ ಅರ್ಜಿ ಹೂಡಿದ್ದಾರೆ.

ದಿಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿರುವ ದ್ವಿಸದಸ್ಯ ಪೀಠವು ಮಂಗಳವಾರದಂದು ಸ್ವಾಮಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ. 

ಏರ್‌ ಇಂಡಿಯಾ ಹೂಡಿಕೆ ಹಿಂಪಡೆಯುವಿಕೆ ಪ್ರಕ್ರಿಯೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಡಿರುವ ಯಾವುದೇ ಒಪ್ಪಂದವನ್ನು, ಅನುಮತಿಗಳನ್ನು ರದ್ದುಗೊಳಿಸಬೇಕೆಂದು ಸ್ವಾಮಿ ಆಗ್ರಹಿಸಿದ್ದಾರೆ. 

ಟಾಟಾ ಸಮೂಹ ಏರ್‌ ಇಂಡಿಯಾದ ಷೇರುಗಳನ್ನು ಖರೀದಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News