×
Ad

ಕೇಂದ್ರದ ಮಾಜಿ ಸಚಿವ,ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೊಗೆ 3ನೇ ಬಾರಿ ಕೊರೋನ ಪಾಸಿಟಿವ್

Update: 2022-01-04 13:50 IST

ಕೋಲ್ಕತಾ: ಕೇಂದ್ರ ಸಚಿವ ಸ್ಥಾನ ಕಳೆದುಕೊಂಡ ನಂತರ ಕಳೆದ ವರ್ಷ ಜುಲೈನಲ್ಲಿ ಬಿಜೆಪಿ ತೊರೆದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಸಂಸದ ಬಾಬುಲ್ ಸುಪ್ರೀಯೋ ತನ್ನ  ಜೊತೆಗೆ ತನ್ನ ಪತ್ನಿ, ತಂದೆ ಹಾಗೂ ಹಲವು ಸಿಬ್ಬಂದಿ ಸದಸ್ಯರಿಗೆ ಕೊರೋನ ಸೋಂಕು ತಗಲಿದೆ ಎಂದು  ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೀವ್ರವಾಗಿ ಅಸ್ವಸ್ಥರಾಗಿರುವವರಿಗೆ ನೀಡಬೇಕಾದ ಕೋವಿಡ್ ಕಾಕ್‌ಟೈಲ್ ಲಸಿಕೆ ಬೆಲೆ ರೂ.61000/-. ತನ್ನ 84 ವರ್ಷದ ತಂದೆಗಾಗಿ ಈ ಲಸಿಕೆ ಖರೀದಿಸಬೇಕು. ಬಡ ವರ್ಗಗಳ ಜನರು ಅದನ್ನು ಹೇಗೆ ಖರೀದಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸುಪ್ರಿಯೊ ಅವರಿಗೆ ನವೆಂಬರ್ 2020 ರಲ್ಲಿ ಮೊದಲ ಬಾರಿಗೆ ಕೊರೋನ ಬಾಧಿಸಿತ್ತು. ಅದೇ ಸಮಯದಲ್ಲಿ ಸೋಂಕಿಗೆ ಒಳಗಾದ ಅವರ ತಾಯಿ ನಂತರ ನಿಧನರಾದರು. ಎಪ್ರಿಲ್ 2021 ರಲ್ಲಿ ದೇಶದಲ್ಲಿ ಎರಡನೇ ಕೋವಿಡ್ ಅಲೆಯ ಸಮಯದಲ್ಲಿ ಸುಪ್ರಿಯೋಗೆ ಎರಡನೇ ಬಾರಿ ಕೊರೋನ ಸೋಂಕು  ಕಾಣಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News