×
Ad

ʼಬುಲ್ಲಿ ಬಾಯ್‌ʼ ಅಪ್ಲಿಕೇಶನ್‌ ಪ್ರಕರಣ: ಬೆಂಗಳೂರು ಮೂಲದ ಆರೋಪಿ ವಿಶಾಲ್‌ ಝಾ ಸಹಿತ ಓರ್ವ ಮಹಿಳೆಯ ಸೆರೆ

Update: 2022-01-04 15:00 IST

ಹೊಸದಿಲ್ಲಿ: ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಕುರಿತಂತೆ ತಮ್ಮ ಧ್ವನಿಯೆತ್ತುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಗುರಿಪಡಿಸಿಕೊಂಡು, ಅವರ ಫೋಟೊಗಳನ್ನು ಆನ್‌ ಲೈನ್‌ ನಲ್ಲಿ ಪ್ರಕಟಿಸಿ ಹರಾಜಿಗಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಮತ್ತು ಇನ್ನೋರ್ವ ಮಹಿಳೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಬೆಂಗಳೂರು ಮೂಲದ ಇಂಜಿನಿಯರಿಂಗ್‌ ವಿದ್ಯಾರ್ಥಿ ವಿಶಾಲ್‌ ಝಾ ಎಂದು ಗುರುತಿಸಲಾಗಿದೆ. 

ಮುಂಬೈ ಪೊಲೀಸರು ವಿಶಾಲ್‌ ಝಾನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ. ನಿನ್ನೆ ಆತನನ್ನು ಮುಂಬೈಗೆ ಕರೆತರಲಾಗಿದ್ದು, ಇದೀಗ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಮಹಿಳೆಯನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು Ndtv.com ವರದಿ ಮಾಡಿದೆ. ಬಂಧಿತ ಯುವಕ ಈ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಪ್ರಮುಖ ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಮಹಿಳೆ 'ಬುಲ್ಲಿ ಬಾಯಿ' ಆಪ್‌ಗೆ ಸಂಬಂಧಿಸಿದ ಮೂರು ಖಾತೆಗಳನ್ನು ನಿರ್ವಹಿಸುತ್ತಿದ್ದಳು. ಸಹ ಆರೋಪಿ ವಿಶಾಲ್ ಕುಮಾರ್ ʼಖಾಲ್ಸಾ ಸುಪ್ರಿಮಾಸಿಸ್ಟ್ʼ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ಡಿಸೆಂಬರ್ 31 ರಂದು, ಅವರು ಸಿಖ್ ಹೆಸರುಗಳನ್ನು ಹೋಲುವ ಇತರ ಖಾತೆಗಳ ಹೆಸರನ್ನು ಬದಲಾಯಿಸಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಜನವರಿ ಒಂದರಂದು ಸಾಮಾಜಿಕ ಮತ್ತು ರಾಜಕೀಯ ವಿಚಾರಗಲೀಗೆ ಸಾಮಾಜಿಕ ತಾಣದಲ್ಲಿ ಧ್ವನಿಯೆತ್ತುವ ಹಲವಾರು ಮುಸ್ಲಿಂ ಮಹಿಳೆಯರ ಹೆಸರು ಹಾಗೂ ಫೋಟೊಗಳನ್ನು ಬಳಸಿ ಹರಾಜಿಗಿಡಲಾಗಿತ್ತು. Github ನಿಂದ ಹೋಸ್ಟ್‌ ಮಾಡಿದ್ದ ಈ ಅಪ್ಲಿಕೇಶನ್‌ ಪ್ರಮುಖ ಸ್ಥರದಲ್ಲಿರುವ ಹಲವು ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಬಳಸಿದೆ.

ಡಾಕ್ಟರೇಟ್‌ ಪದವಿ ಪಡೆದಿರುವವರು, ಪ್ರಮುಖ ಪತ್ರಕರ್ತೆಯರು, ಕಾರ್ಯಕರ್ತೆಯರು ಹಾಗೂ ವಕೀಲರನ್ನೂ ಈ ತಂಡ ಗುರಿಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News