ಬೂಸ್ಟರ್ ಡೋಸ್ ಹಿಂದಿನ ಡೋಸ್ ನಂತೇ ಇರಲಿದೆ: ಕೇಂದ್ರ ಸರಕಾರ

Update: 2022-01-05 18:10 GMT

ಹೊಸದಿಲ್ಲಿ, ಜ. 5: ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡುವಾಗ ಕೋವಿಡ್ ಲಸಿಕೆಗಳ ಮಿಶ್ರಣ ಮಾಡುವುದಿಲ್ಲ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ. 

‘‘ಮುನ್ನೆಚ್ಚರಿಕಾ ಕೋವಿಡ್ ಲಸಿಕೆಯ ಡೋಸ್ ಈ ಹಿಂದೆ ನೀಡಿದ ಲಸಿಕೆಯ ಡೋಸ್‌ನಂತೆಯೇ ಇರಲಿದೆ’’ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದ್ದಾರೆ. 

ಕೋವ್ಯಾಕ್ಸಿನ್ ಲಸಿಕೆಯ ಡೋಸ್ ತೆಗೆದುಕೊಂಡವರು ಅದೇ ಲಸಿಕೆಯ ಡೋಸ್ ಹಾಗೂ ಕೋವಿಶೀಲ್ಡ್ ನ ಪ್ರಾಥಮಿಕ ಎರಡು ಡೋಸ್ ತೆಗೆದುಕೊಂಡವರು ಅದೇ ಲಸಿಕೆಯ ಡೋಸ್ ಅನ್ನೇ ಪಡೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರು ಹಾಗೂ ಬಹು ರೋಗಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜನವರಿ 10ರಿಂದ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್‌ಗಳನ್ನು ನೀಡಲಾಗುವುದು ಎಂದು ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಆದರೆ, ಲಸಿಕೆಗಳ ಮಿಶ್ರಣದ ಡೋಸ್‌ಗಳನ್ನು ನೀಡಲು ಅನುಮತಿಸಲಾಗಿದೆಯೇ ಎಂಬ ಬಗ್ಗೆ ಸರಕಾರ ಸ್ಪಷ್ಟನೆ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News