ರಶ್ಯಾಕ್ಕೆ ಯುರೋಪಿಯನ್ ಯೂನಿಯನ್ ಎಚ್ಚರಿಕೆ

Update: 2022-01-06 17:39 GMT
 photo:PTI

ಬ್ರಸೆಲ್ಸ್, ಜ.6: ಕಝಕಿಸ್ತಾನಕ್ಕೆ ರಶ್ಯಾ ನೇತೃತ್ವದ ಶಾಂತಿಪಾಲನಾ ಪಡೆ ರವಾನಿಸಿರುವುದನ್ನು ಖಂಡಿಸಿರುವ ಯುರೋಪಿಯನ್ ಯೂನಿಯನ್ , ರಶ್ಯಾವು ಕಝಕಿಸ್ತಾನದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಆಗ್ರಹಿಸಿದೆ.

ನೆರೆಹೊರೆಯ ದೇಶದ ವ್ಯವಹಾರದಲ್ಲಿ ರಶ್ಯಾದ ಹಸ್ತಕ್ಷೇಪ ಹೆಚ್ಚುತ್ತಿದೆ. ಇದೀಗ ಕಝಕಿಸ್ತಾನದ ಬಿಕ್ಕಟ್ಟಿನ ಲಾಭ ಪಡೆದು ಆ ದೇಶದ ಆಂತರಿಕ ವ್ಯವಹಾರದಲ್ಲೂ ಹಸ್ತಕ್ಷೇಪಕ್ಕೆ ರಶ್ಯಾ ಮುಂದಾಗಿದೆ ಎಂದು ಯುರೋಪಿಯನ್ ಯೂನಿಯನ್ ಖಂಡಿಸಿದೆ.

ಈ ಮಧ್ಯೆ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟವರಲ್ಲಿ ಭದ್ರತಾ ಪಡೆಯ ಇಬ್ಬರು ಯೋಧರೂ ಸೇರಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿರುವ ಅಧ್ಯಕ್ಷ ಕಾಸಿಮ್ ಟೊಕಯೆವ್, ಸರಕಾರವನ್ನು ವಜಾಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News