ಇಸ್ರೇಲ್ ಸೇನೆಯಿಂದ ಪೆಲೆಸ್ತೀನ್ ಪ್ರಜೆಯ ಹತ್ಯೆ
Update: 2022-01-06 23:56 IST
ರಮಲ್ಲಾ, ಜ.6: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಗುರುವಾರ ಇಸ್ರೇಲ್ ಸೇನೆ ಪೆಲೆಸ್ತೀನ್ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪೆಲೆಸ್ತೀನ್‌ನ ಭದ್ರತಾ ಪಡೆಯ ಮೂಲಗಳು ಹೇಳಿವೆ.
ಪಶ್ಚಿಮ ದಂಡೆಯ ಉತ್ತರದ ನಬ್ಲೂಸ್ ನಗರಕ್ಕೆ ತಪಾಸಣೆಗೆಂದು ಆಗಮಿಸಿದ ಇಸ್ರೇಲ್ ಸೇನೆ, ಬಲಾಟಾ ನಿರಾಶ್ರಿತರ ಶಿಬಿರದ ನಿವಾಸಿ ಬಾಕಿರ್ ಹಶಾಶ್ (21 ವರ್ಷ) ಎಂಬಾತದ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಮೂಲಗಳು ಹೇಳಿವೆ.