ಯೆಹೂದಿ ಧರ್ಮಗುರುವಿಗೆ ಅಮೆರಿಕದಲ್ಲಿ ಜೈಲುಶಿಕ್ಷೆ

Update: 2022-01-06 18:28 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಜ.6: ದಕ್ಷಿಣ ಕ್ಯಾಲಿಫೋರ್ನಿಯಾದ ಪೊವೆ ಪ್ರಾಂತದಲ್ಲಿ ಯೆಹೂದಿ ಪ್ರಾರ್ಥನಾಲಯದ ಮೇಲೆ ನಡೆದಿದ್ದ ಮಾರಣಾಂತಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೆಹೂದಿ ಧರ್ಮಗುರು ಯಿಸ್ರೊಲ್  ಗೋಲ್ಡ್‌ ಸೈನ್ ಬಹು ಮಿಲಿಯನ್ ಡಾಲರ್ ದೇಣಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯ, ಅವರಿಗೆ 14 ತಿಂಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ 2.8 ಮಿಲಿಯನ್ ಡಾಲರ್ ಮೊತ್ತವನ್ನು ಮರಳಿಸುವಂತೆ ನ್ಯಾಯಾಲಯ ಸೂಚಿಸಿದೆ.

ಸ್ಯಾನ್ ಡಿಯಾಗೊದಲ್ಲಿ 1986ರಲ್ಲಿ ಯೆಹೂದಿ ಪ್ರಾರ್ಥನಾಲಯ ಸ್ಥಾಪಿಸಿದ್ದ ಗೋಲ್ಡ್ ಸ್ಟೈನ್, ಇದಕ್ಕೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ 6.2 ಮಿಲಿಯನ್ ಡಾಲರ್ ದೇಣಿಗೆ ಪಡೆದು ವಂಚಿಸಿರುವ ಆರೋಪವಿದೆ. ದೇಣಿಗೆಗೆ ನಕಲಿ ರಶೀದಿ ನೀಡಿ ದೇಣಿಗೆದಾರರಿಗೆ 90% ಮೊತ್ತ ಹಿಂದಿರುಗಿಸಿ 10% ಮೊತ್ತವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾನೆ. ದೇಣಿಗೆಗೆ ತೆರಿಗೆ ವಿನಾಯಿತಿ ಇರುವುದರಿಂದ ಈ ರೀತಿಯಲ್ಲಿ ಬೃಹತ್ ಉದ್ದಿಮೆದಾರರಿಗೆ ತೆರಿಗೆ ತಪ್ಪಿಸಲು ನೆರವಾಗಿರುವ ಆರೋಪ ಗೋಲ್ಡ್ ಸ್ಟೈನ್ ಮೇಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News