2021ರಲ್ಲಿ ಆಹಾರ ದರ 28% ಹೆಚ್ಚಳವಾಗಿದ್ದು 10 ವರ್ಷದಲ್ಲೇ ಗರಿಷ್ಟ: ವಿಶ್ವಸಂಸ್ಥೆ

Update: 2022-01-07 16:45 GMT

ಪ್ಯಾರಿಸ್, ಜ.7: ಜಾಗತಿಕ ಆಹಾರ ದರ 2021ರಲ್ಲಿ 28% ಏರಿಕೆಯಾಗಿದ್ದು ಕಳೆದ 10 ವರ್ಷಗಳಲ್ಲೇ ಇದು ದಾಖಲೆಯಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಒ) ಗುರುವಾರ ಹೇಳಿದೆ.

ವಿಶ್ವದಾದ್ಯಂತ ವಾಡಿಕೆಯ ವ್ಯಾಪಾರ ವಸ್ತುಗಳ ಮಾಸಿಕ ಬದಲಾವಣೆಯನ್ನು ಗಮನಿಸಿ ದಾಖಲಿಸುವ ಆಹಾರ ಬೆಲೆ ಸೂಚ್ಯಂಕದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಆಹಾರ ವಸ್ತುಗಳ ಬೆಲೆ ತುಸು ಕಡಿಮೆ ದಾಖಲಾಗಿದೆ. ಆದರೂ, 133.7 ಅಂಕಕ್ಕೆ ಏರಿದ್ದು ಇದು 2011ರ ಫೆಬ್ರವರಿಯಲ್ಲಿ ದಾಖಲಾದ 137.6 ಅಂಕದ ಬಳಿಕದ ಅತೀ ಗರಿಷ್ಟ ಅಂಕವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸೂಚ್ಯಂಕದಲ್ಲಿ 125.7 ಅಂಕ ದಾಖಲಾಗಿತ್ತು ಎಂದು ವಿಶ್ವಸಂಸ್ಥೆ ಹೇಳಿದೆ.

ಖಾದ್ಯತೈಲದ ಸರಾಸರಿ ಬೆಲೆ ಕಳೆದ ವರ್ಷ 66% ಹೆಚ್ಚಿತ್ತು. 2021ರಲ್ಲಿ ಕಾಳುಗಳ ಬೆಲೆ 27%, ಧಾನ್ಯಗಳ ಬೆಲೆ 44.1%, ಗೋಧಿ ಬೆಲೆ 31.3%, ಮಾಂಸದ ಬೆಲೆ 12.7% , ಡೈರಿ ಉತ್ಪನ್ನಗಳ ಬೆಲೆ 16.9% ಏರಿಕೆಯಾಗಿತ್ತು . ಸಾಮಾನ್ಯವಾಗಿ ಬೆಲೆ ಹೆಚ್ಚಿದರೆ ಉತ್ಪಾದನೆಯೂ ಹೆಚ್ಚಲು ದಾರಿಯಾಗುತ್ತದೆ. ಆದರೆ ಉತ್ಪಾದನೆ ವೆಚ್ಚದಲ್ಲಿ ಏರಿಕೆ, ಈಗ ಜಗತ್ತಿನೆಲ್ಲೆಡೆ ಆತಂಕ ಹುಟ್ಟಿಸಿರುವ ಸಾಂಕ್ರಾಮಿಕ, ಹವಾಮಾನ ಪರಿಸ್ಥಿತಿಯ ಅನಿಶ್ಚಿತತೆಯು 2022ರಲ್ಲೂ ಸ್ಥಿರ ಮಾರುಕಟ್ಟೆ ಪರಿಸ್ಥಿತಿ ಮರುಕಳಿಸುವ ಸಾಧ್ಯತೆಯನ್ನು ಮಸುಕಾಗಿಸಿದೆ . ಕಳೆದ ವರ್ಷ ಬೇಡಿಕೆ ಹೆಚ್ಚಿದ್ದರಿಂದ ಆಹಾರ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಎಫ್ಎಒದ ಹಿರಿಯ ಅರ್ಥಶಾಸ್ತ್ರಜ್ಞ ಅಬ್ದುಲ್‌ ರಝಾ ಅಬ್ಬಾಸಿಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News