×
Ad

7 ಲಕ್ಷ ರೂ. ವೆಚ್ಚ ಮಾಡಿ ನಾಯಿಯ ಹುಟ್ಟು ಹಬ್ಬ ಆಚರಣೆ: ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ಮೂವರ ಬಂಧನ

Update: 2022-01-08 22:50 IST

ಗಾಂಧಿನಗರ, ಜ. 8: ಕೋವಿಡ್ ನಿಯಮ ಉಲ್ಲಂಘಿಸಿ ಸಾಕು ನಾಯಿಯ ಹುಟ್ಟು ಹಬ್ಬ ಆಚರಿಸಿದ ಆರೋಪದಲ್ಲಿ ಗುಜರಾತ್ ಪೊಲೀಸರು ಶನಿವಾರ ಮೂವರನ್ನು ಬಂಧಿಸಿದ್ದಾರೆ. 

ಅಹ್ಮದಾಬಾದ್ ನ ನವ ನರೋಡಾದ ನಿವಾಸಿ ಚಿರಾಗ್ ಆಲಿಯಾಸ್ ದಾಗೊ ಮಿನೇಶ್ಭಾ ಪಟೇಲ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಸ್ವಂತ ಪಾನ್ ಪಾರ್ಲರ್ ಇಟ್ಟುಕೊಂಡಿದ್ದ. ಪಟೇಲ್ ತನ್ನ ಆ್ಯಬಿ ಹೆಸರಿನ ಪೊಮೆರಿಯನ್ ನಾಯಿಯ ಹುಟ್ಟು ಹಬ್ಬವನ್ನು ಪಾರ್ಟಿ ಪ್ಲಾಟ್ ನಲ್ಲಿರುವ ನಿಕೋಲೆಯಲ್ಲಿ ಆಯೋಜಿಸಿದ್ದ. ಅಲ್ಲದೆ, ಸಂಬಂಧಿಕರನ್ನು ಆಹ್ವಾನಿಸಿದ್ದ. 

ಪಾರ್ಟಿಯಲ್ಲಿ ಎಲ್ಲರೂ ಮಾಸ್ಕ್ ಧರಿಸದೆ ಪಾಲ್ಗೊಂಡಿದ್ದರು. ಈ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ಇತರರೊಂದಿಗೆ ಚಿರಾಗ್ ಆಲಿಯಾಸ್ ಡಾಗೋ ಪಟೇಲ್, ಊರ್ವಶಿ ಪಟೇಲ್, ದಿವ್ಯೇಶ್ ಮೆಹ್ರಿ ಮಾಸ್ಕ್ ಧರಿಸದೇ ಪಾಲ್ಗೊಂಡಿರುವುದು ದಾಖಲಾಗಿತ್ತು. ವೀಡಿಯೊ ವೀಕ್ಷಿಸಿದ ಪೊಲೀಸರು ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಹುಟ್ಟು ಹಬ್ಬಕ್ಕೆ ಪಟೇಲ್ ಸರಿಸುಮಾರು 7 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News