ಕಪ್ಪು ಜನಾಂಗೀಯ ಅಮೆರಿಕನ್ ಪ್ರಜೆಯ ಹತ್ಯೆಗೈದ ಮೂವರು ಬಿಳಿಯರಿಗೆ ಜೀವಾವಧಿ ಶಿಕ್ಷೆ
ವಾಷಿಂಗ್ಟನ್,ಜ.9: ಆಫ್ರಿಕದ ಮೂಲದ ಅಮೆರಿಕನ್ ಪ್ರಜೆ ಅಹ್ಮದ್ ಆರ್ಬೆರಿ ಅವರು ಜಾಗಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪಿಕ್ಅಪ್ ವಾಹನಗಳಲ್ಲಿ ಬೆನ್ನಟ್ಟಿ ಹತ್ಯೆಗೈದ ಪ್ರಕರಣದ ಮೂವರು ಬಿಳಿ ಜನಾಂಗೀಯರಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
35 ಲರ್ಷ ವಯಸ್ಸಿನ ಟ್ರಾವಿಸ್ ಮ್ಯಾಕ್‌ಮೈಕೆಲ್, ಆತನ ತಂದೆ ಗ್ರೆಗರಿ ಮ್ಯಾಕ್‌ಮೈಕೆಲ್ (66) ಅವರಿಗೆ ಪರೋಲ್‌ರಹಿತ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಅವರ ನೆರೆಯಾತ ಮತ್ತು ಪ್ರಕರಣದ ಮೂರನೆ ಆರೋಪಿ ವಿಲಿಯಂ ರೊಡ್ಡಿ ಬ್ರಿಯಾನ್ (52), ಈ ಕೊಲೆ ಪ್ರಕರಣದಲ್ಲಿ ಕಡಿಮೆ ಪ್ರಮಾಣದ ಪಾತ್ರವಹಿಸಿರುವುದರಿಂದ ಆತನಿಗೆ ಪರೋಲ್ ಅವಕಾಶದ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
25 ವರ್ಷ ವಯಸ್ಸಿನ ಅಹ್ಮದ್ ಅರ್ಬೆರಿ 2020ರ ಫೆಬ್ರವರಿ 23ರಂದು ಜಾರ್ಜಿಯಾ ರಾಜ್ಯದ ಬ್ರುನ್ಸ್‌ವಿಕ್‌ನ ಸಮುದ್ರ ಕಿನಾರೆಯಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ಈ ಮೂವರು ಆರೋಪಿಗಳನ್ನು ಆತನನ್ನು ವಾಹನಗಳಲ್ಲಿ ಬೆನ್ನಟ್ಟಿ ಅಪಹರಿಸಿದ್ದರು. ಆತನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಪ್ರಕರಣದಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಜಾರ್ಜಿಯಾದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಥಿಮೊತಿ ವಾಮ್‌ಸ್ಲೆ ಅವರು ಈ ಕೊಲೆಯು ಹಲವಾರ ಮಟ್ಟದಲ್ಲಿ ಒಂದು ದುರಂತವಾಗಿದೆ ಎಂದು ಬಣ್ಣಿಸಿದ್ದರು.