ಇರಾನ್ ನಿಂದ ಯೆಮನ್ ಗೆ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣಿಕೆ: ವರದಿ

Update: 2022-01-10 04:35 GMT

ವಾಷಿಂಗ್ಟನ್, ಜ.9: ಇತ್ತೀಚಿನ ದಿನಗಳಲ್ಲಿ ಅರೆಬಿಯನ್ ಸಮುದ್ರ ವ್ಯಾಪ್ತಿಯಲ್ಲಿ ಜಫ್ತಿ ಮಾಡಲಾದ ಸಾವಿರಾರು ಶಸ್ತ್ರಾಸ್ತ್ರಗಳು ಇರಾನ್ನ ಬಂದರಿನಿಂದ ರವಾನೆಯಾಗಿರುವ ಸಾಧ್ಯತೆಯಿದ್ದು ಇರಾನ್ನಿಂದ ಯೆಮನ್ ಮತ್ತು ಇತರೆಡೆ ಶಸ್ತ್ರಾಸ್ತ್ರ ರವಾನೆಯಾಗುತ್ತಿರುವುದಕ್ಕೆ ಪುರಾವೆಯಾಗಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿರುವುದಾಗಿ ಅಮೆರಿಕದ ‘ವಾಲ್ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. 

2014ರಿಂದ ಯೆಮೆನ್ ನಲ್ಲಿ ಅಂತರ್ಯುದ್ಧ ಉಲ್ಬಣಿಸಿದ್ದು ಇರಾನ್ ಬೆಂಬಲಿತ ಹೌದಿ ಬಂಡುಗೋರರು ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ವಿರುದ್ಧ ಸಂಘರ್ಷದಲ್ಲಿ ನಿರತವಾಗಿದೆ. 2015ರಲ್ಲಿ ವಿಶ್ವಸಂಸ್ಥೆಯು ಹೌದಿಗಳ ಮೇಲೆ ಶಸ್ತ್ರಾಸ್ತ್ರ ಪ್ರತಿಬಂಧ ವಿಧಿಸಿದೆ. 

ರಶ್ಯಾ, ಚೀನಾ ಮತ್ತು ಇರಾನ್ ನಿಂದ ಶಸ್ತ್ರಾಸ್ತ್ರಗಳನ್ನು ಯೆಮನ್ ಗೆ ಕಳ್ಳಸಾಗಾಟ ಮಾಡಲು ರಸ್ತೆ ಮಾರ್ಗವನ್ನು ಬಳಸಲಾಗುತ್ತಿದೆ. ಈ ಶಸ್ತ್ರಾಸ್ತ್ರದಲ್ಲಿ ರಾಕೆಟ್ ಲಾಂಚರ್ಗಳು, ಮೆಷೀನ್ ಗನ್, ಸ್ನಿಪರ್ ರೈಫಲ್ ಗಳು ಸೇರಿವೆ. ಇಂತಹ ಆಯುಧಗಳನ್ನು ಅಮೆರಿಕದ ನೌಕಾ ಸೇನೆ ಇತ್ತೀಚೆಗೆ ವಶಕ್ಕೆ ಪಡೆದಿದೆ. ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ನೌಕೆ ಇರಾನ್ನ ಜಾಸ್ಕ್ ಬಂದರಿನಿಂದ ಪ್ರಯಾಣ ಆರಂಭಿಸಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ರಹಸ್ಯ ವರದಿ ನೀಡಿದೆ. ಈ ಆರೋಪರನ್ನು ಇರಾನ್ ನ ಮಾಹಿತಿ ಇಲಾಖೆಯ ಸಹಾಯಕ ಸಚಿವರು ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News