ಕಾ.ವೆಂ. ಸಾಹಿತ್ಯ ವಿಮರ್ಶೆ

Update: 2022-01-10 05:44 GMT

 ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರ ತುಂಬ ಶ್ರೀಮಂತವಾಗಿದೆ. ಪರಂಪರೆಯ ಗ್ರಹಿಕೆ, ವಸ್ತುನಿಷ್ಠತೆ, ತಾತ್ವಿಕ- ಸೂಕ್ಷ್ಮಪ್ರಜ್ಞೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸತ್ಯದ ಅರಿವು ಇಂಥವುಗಳ ಸಂವೇದನೆಯೊಂದಿಗೆ, ಸಾಂದರ್ಭಿಕ ಸವಾಲುಗಳೊಂದಿಗೆ ಮಹತ್ತನ್ನು ಸಾಧಿಸಿದೆ ಎಂಬ ಹೆಮ್ಮೆ ನಮ್ಮದಾಗಿದೆ. ಈ ಕ್ಷೇತ್ರ ಹೀಗೆ ಎದ್ದು ನಿಂತಿದೆ ಎಂದರೆ ಅದರ ಹಿಂದೆ ಡಾ. ಕಾ ವೆಂ ಶ್ರೀನಿವಾಸಮೂರ್ತಿ ಅವರಂತಹ ವಿಮರ್ಶಕರಿದ್ದಾರೆ ಎನ್ನುವುದಾಗಿದೆ.

 ಡಾ. ಕಾ ವೆಂ ಶ್ರೀನಿವಾಸಮೂರ್ತಿಯವರು ಕನ್ನಡದ ಮಹತ್ವದ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಿಮರ್ಶಾ ವಿಧಾನದಿಂದಲೇ ಓದುಗರಿಗೆ ಆಪ್ತರಾಗಿ ಬಿಡುತ್ತಾರೆ. ಇವರ ವಿಮರ್ಶನ ಕೃತಿಗಳು ಸಮಗ್ರವಾಗಿ ಸಂಪುಟಗಳಲ್ಲಿ ಹೊರ ಬಂದುದು ಅವರ ವಿಮರ್ಶೆಯನ್ನು ಅರ್ಥ್ಯೆಯಿಸಿಕೊಳ್ಳಲು ಹಾಗೂ ಕನ್ನಡ ವಿಮರ್ಶೆಯ ಭಿನ್ನ ಆಯಾಮಗಳ ಶಕ್ತಿ ಸ್ವರೂಪವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಇವರ ಭಿನ್ನ ಪರಿಕಲ್ಪನಾತ್ಮಕ ಹಾಗೂ ತಾತ್ವಿಕ ವಿಮರ್ಶೆಯ ಮಾರ್ಗಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಕನ್ನಡದ ಮಹತ್ವದ ವಿಮರ್ಶಕರು ಈಗಾಗಲೇ ಇವರ ವಿಮರ್ಶೆ ಕುರಿತು ಮಾತನಾಡುತ್ತ ಇವರನ್ನು ಸಾಂಸ್ಕೃತಿಕ, ಬಹು ಶಿಸ್ತಿನ ವಿಮರ್ಶಕರೆಂದೂ ಹಾಗೂ ಭಿನ್ನ ಪರಿಕಲ್ಪನಾತ್ಮಕ ವಿಮರ್ಶೆಗಳ ಹೆಸರಲ್ಲೂ ಗುರುತಿಸಿರುವುದಿದೆ. ಒಬ್ಬ ವಿಮರ್ಶಕನಿಗೆ ಇಂಥ ಧೋರಣೆಗಳೊಂದಿಗೆ ಶೋಧನ ಪ್ರವೃತ್ತಿಯೂ ಒಂದು ಭಾಗವಾದಾಗ; ರೈಲು ಹಳಿಯ ಅಥವಾ ಸಿದ್ಧ ಮಾರ್ಗವನಷ್ಟೇ ತುಳಿಯದೆ ತನ್ನದೇ ದಾರಿಯನ್ನು ವಿಮರ್ಶಕ ರೂಪಿಸಿಕೊಳ್ಳುತ್ತಾನೆ ಅಂತಹ ಹೆಜ್ಜೆಗಳು ಇಲ್ಲಿವೆ. ಇದಕ್ಕೆ ಕಾರಣ ಇವರ ಶ್ರೀಸಾಮಾನ್ಯತ್ವ ಪ್ರಜ್ಞೆಯ ದ್ವನಿಯನ್ನು ಅರಸಿ ಹೊರಟದ್ದೇ ಆಗಿದ್ದು, ಬೀಸು ಹೇಳಿಕೆಗಿಂತ ಗಂಭೀರ ವ್ಯಾಖ್ಯಾನರೂಪಿ ಪ್ರತಿಪಾದನೆ ಭಿನ್ನಭಿಪ್ರಾಯಕ್ಕೆ ಮರುಮಥನಕ್ಕೆ ಭೂಮಿಕೆಯನ್ನು ಒದಗಿಸುತ್ತದೆ ವಿಮರ್ಶೆ ಮಾಡಬೇಕಾದ ಕಾರ್ಯವೇ ಇದಾಗಿದೆ ಎನ್ನುವುದು ನನ್ನ ನಂಬಿಕೆ. ಇದಕ್ಕೆ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಈ ಮೂರು ನೆಲೆಯ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡದ್ದು ಪ್ರಬುದ್ಧ್ಧತೆ ದಕ್ಕುವಂತಾಗಿದೆ.

Writer - ಡಾ. ಅರವಿಂದ ಮಾಲಗತ್ತಿ

contributor

Editor - ಡಾ. ಅರವಿಂದ ಮಾಲಗತ್ತಿ

contributor

Similar News

ಜಗದಗಲ
ಜಗ ದಗಲ