×
Ad

2021 ಜುಲೈ ಸೆಪ್ಟಂಬರ್ ನಲ್ಲಿ 9 ಆಯ್ದ ವಲಯ ಗಳಲ್ಲಿ ಒಟ್ಟು 3.10 ಕೋಟಿ ಉದ್ಯೋಗ ಏರಿಕೆ

Update: 2022-01-10 23:59 IST

ಹೊಸದಿಲ್ಲಿ, ಜ. 10: 2021 ಜುಲೈಯಿಂದ ಸೆಪ್ಟಂಬರ್ ವರೆಗಿನ ತ್ರೈಮಾಸಿಕದಲ್ಲಿ 9 ಆಯ್ದ ವಲಯಗಳಲ್ಲಿ ಸೃಷ್ಟಿಯಾದ ಒಟ್ಟು ಉದ್ಯೋಗ 3.10 ಕೋಟಿ. ಇದು ಎಪ್ರಿಲ್-ಜೂನ್ ಅವಧಿಗಿಂತ 2 ಲಕ್ಷ ಅಧಿಕ ಎಂದು ಕಾರ್ಮಿಕ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ತ್ರೈಮಾಸಿಕ ಉದ್ಯೋಗ ಸಮೀಕ್ಷೆ ತಿಳಿಸಿದೆ. 2021ರ ಎಪ್ರಿಲ್‌ ಜೂನ್ ನಲ್ಲಿ ಆಯ್ದ 9 ವಲಯಗಳಲ್ಲಿ ಒಟ್ಟು ಉದ್ಯೋಗ ಸಂಖ್ಯೆ 3.08 ಕೋಟಿ ಇತ್ತು ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರು ಬಿಡುಗಡೆ ಮಾಡಿದ ತ್ರೈಮಾಸಿಕ ಉದ್ಯೋಗ ಸಮೀಕ್ಷೆ (ಕ್ಯುಇಎಸ್) ವರದಿ ಹೇಳಿದೆ. 

ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ 2021 ಎಪ್ರಿಲ್‌ನಲ್ಲಿ ದೇಶಕ್ಕೆ ಅಪ್ಪಳಿಸಿದ ಬಳಿಕ ಕೊರೋನ ಸೋಂಕು ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್ಡೌನ್ ಅನ್ನು ರಾಜ್ಯಗಳು ಹಿಂಪಡೆದ ಬಳಿಕ ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆಯಾಗಿರುವುದನ್ನು ಇದು ಸೂಚಿಸಿದೆ. ಕೃಷಿಯೋತರ ವಲಯಗಳ ಒಟ್ಟು ಉದ್ಯೋಗದಲ್ಲಿ ಬಹುಪಾಲು ಈ 9 ವಲಯಗಳಾದ ಉತ್ಪಾದನೆ, ನಿರ್ಮಾಣ, ವ್ಯಾಪಾರ, ಸಾಗಾಟ, ಶಿಕ್ಷಣ, ಆರೋಗ್ಯ, ವಸತಿ ಹಾಗೂ ರೆಸ್ಟೋರೆಂಟ್, ಐಟಿ/ಬಿಪಿಒ ಹಾಗೂ ಹಣಕಾಸು ಸೇವೆಗಳಲ್ಲಿ ಕಂಡು ಬಂದಿದೆ. ಇದು ಎರಡನೇ ವರದಿ. ಮೊದಲನೇ ವರದಿ 2021 ಎಪ್ರಿಲ್-ಜೂನ್ನಲ್ಲಿ ಬಿಡುಗಡೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News