×
Ad

ದಕ್ಷಿಣ ಚೀನಾ ಸಮುದ್ರದ ಕುರಿತ ಚೀನಾದ ಪ್ರತಿಪಾದನೆ ಅಂತರಾಷ್ಟ್ರೀಯ ಕಾನೂನಿನ ಕಡೆಗಣನೆ: ಅಮೆರಿಕ ವಿದೇಶ ಇಲಾಖೆ‌

Update: 2022-01-13 23:40 IST

ವಾಷಿಂಗ್ಟನ್, ಜ.13: ದಕ್ಷಿಣ ಚೀನಾ ಸಮುದ್ರದ ಪ್ರಮುಖ ವ್ಯಾಪಾರ ಮಾರ್ಗಗಳ ಮೇಲಿನ ಐತಿಹಾಸಿಕ ಹಕ್ಕು ಪ್ರತಿಪಾದನೆ ಸಹಿತ ಚೀನಾದ ಚಟುವಟಿಕೆಗಳು ಸಾರ್ವತ್ರಿಕ ಮಾನ್ಯತೆ ಪಡೆದ ಅಂತರಾಷ್ಟ್ರೀಯ ಕಾನೂನಿನ ಪರಿಚ್ಛೇದವನ್ನು ದುರ್ಬಲಗೊಳಿಸುತ್ತಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಸಚಿವಾಲಯದ ಇತ್ತೀಚಿನ ವರದಿ ಉಲ್ಲೇಖಿಸಿದೆ.

ಚೀನಾದ ಉಪಕ್ರಮವು ದಕ್ಷಿಣ ಚೀನಾ ಸಮುದ್ರವ್ಯಾಪ್ತಿಯ ಮೇಲೆ ಕಾನೂನುಬಾಹಿರ ಸಾರ್ವಭೌಮತ್ವದ ಪ್ರತಿಪಾದನೆಯಾಗಿದೆ . ಈ ಕಾರಣಕ್ಕೆ, ಅಮೆರಿಕ ಮತ್ತು ಹಲವು ಇತರ ದೇಶಗಳು ಈ ಪ್ರತಿಪಾದನೆಯಲ್ಲಿ ತಿರಸ್ಕರಿಸಿವೆ ಮತ್ತು ದಕ್ಷಿಣ ಚೀನಾ ಹಾಗೂ ವಿಶ್ವದೆಲ್ಲೆಡೆ ನಿಯಮಾಧಾರಿತ ಅಂತರಾಷ್ಟ್ರೀಯ ಸಮುದ್ರ ವ್ಯವಸ್ಥೆ ಜಾರಿಯಲ್ಲಿರಬೇಕೆಂದು ದೃಢಪಡಿಸಿವೆ ಎಂದು ಬುಧವಾರ ಪ್ರಕಟವಾದ ವರದಿಯಲ್ಲಿ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ವಾಸ್ತವಿಕ ವಿಷಯಗಳಿಲ್ಲದ , 3.5 ಮಿಲಿಯನ್ ಚದರ ಕಿಮೀ ವ್ಯಾಪ್ತಿಯ ಸಮುದ್ರ ವ್ಯಾಪ್ತಿಯ ಮೇಲೆ ಐತಿಹಾಸಿಕ ಹಕ್ಕು ಸಾಧಿಸುವ ಚೀನಾದ ಘೋಷಣೆಯಲ್ಲಿ ಖಚಿತತೆಯ ಕೊರತೆಯಿದೆ. ಐತಿಹಾಸಿಕ ಹಕ್ಕು ಸಾಧನೆಗೆ ಅಂತರಾಷ್ಟ್ರೀಯ ಕಾನೂನಿನ ಆಧಾರವಿದೆ ಎಂದು ಚೀನಾ ಹೇಳಿದೆ, ಆದರೆ ಈ ಹೇಳಿಕೆಗೆ ಕಾನೂನು ಸಮರ್ಥನೆ ಒದಗಿಸಿಲ್ ಎಂದು ‘ಸಮುದ್ರದಲ್ಲಿ ಮಿತಿಗಳು’ ಎಂಬ ಶೀರ್ಷಿಕೆಯ ವರದಿಯಲ್ಲಿ ತಿಳಿಸಲಾಗಿದೆ.

ಸಂಪೂರ್ಣ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯ ಮೇಲೆ ಚೀನಾ ಹಕ್ಕು ಸಾಧಿಸುತ್ತಿರುವುದನ್ನು ಪ್ರಶ್ನಿಸಿ ಫಿಲಿಪ್ಪೀನ್ಸ್ ಅಂತರಾಷ್ಟ್ರೀಯ ನ್ಯಾಯಮಂಡಳಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ತೀರ್ಪು ನೀಡಿದ್ದ ಅಂತರಾಷ್ಟ್ರೀಯ ನ್ಯಾಯಮಂಡಳಿ, ಚೀನಾದ ಪ್ರತಿಪಾದನೆಗೆ ಯಾವುದೇ ಕಾನೂನು ಆಧಾರವಿಲ್ಲ ಎಂದಿತ್ತು. ಈ ವಲಯದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಿಕೊಳ್ಳಲು ಚೀನಾ ನಡೆಸುತ್ತಿರುವ ಪ್ರಯತ್ನಗಳಿಗೆ ರಾಜತಾಂತ್ರಿಕ ಮತ್ತು ಇತರ ಪ್ರಕ್ರಿಯೆಗಳ ಮೂಲಕ ಇದಿರೇಟು ನೀಡುತ್ತಿರುವ ಅಮೆರಿಕ, ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಸಮುದ್ರಯಾನ ಹಕ್ಕುಗಳನ್ನು ಪ್ರತಿಪಾದಿಸಿ ಹಲವು ಯುದ್ಧವಿಮಾನ ಹಾಗೂ ಸಮರನೌಕೆಗಳನ್ನು ಅಲ್ಲಿಗೆ ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News