ಜ.16- ಜ.19: ಅಜಿಲಮೊಗರು 749ನೆ ಮಾಲಿದಾ ಉರೂಸ್

Update: 2022-01-15 08:07 GMT

ಬಿ.ಸಿ.ರೋಡ್: ಹಝ್ರತ್ ಸೈಯ್ಯದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಅಜಿಲಮೊಗರು 749 ನೇ ಮಾಲಿದಾ ಉರೂಸ್ ಈ ಬಾರಿ ಪ್ರಥಮ ಬಾರಿಗೆ ಹಗಲು ಹೊತ್ತಿನಲ್ಲಿ ಜ.16 ರಿಂದ19 ರ ತನಕ ನಡೆಯಲಿದೆ.

ಎಲ್ಲಾ ಕಾರ್ಯಕ್ರಮಗಳು ಕೋವಿಡ್ ನಿಯಮಾವಳಿಗಳಿಗೆ ಅನುಗುಣವಾಗಿ ನಡೆಯಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಲಾಗಿದೆ.

ಜಿಲ್ಲಾ ಕೇಂದ್ರ ಮಂಗಳೂರಿನಿಂದ ಅಜಿಲಮೊಗರು ಗೆ 38 ಕಿ.ಮೀ. ಬಂಟ್ವಾಳದಿಂದ 14 ಕಿ.ಮೀ.ದೂರವಿರುತ್ತದೆ. ಪುತ್ತೂರು ಕಡೆಯಿಂದ ಬರುವವರು ಗಡಿಯಾರ್ ಮಾರ್ಗವಾಗಿ ಕಡೇಶಿವಾಲಯಕ್ಕೆ ಬಂದು ನೇತ್ರಾವತಿ ನದಿ ದಾಟಿ ಅಜಿಲಮೊಗರು ತಲುಪಬಹುದು. ಬಂಟ್ವಾಳ ಮಣಿಹಳ್ಳ ರಸ್ತೆ,  ವಗ್ಗ ಕಾರಿಂಜ ರಸ್ತೆ, ಮಡಂತ್ಯಾರು ಪಾಂಡವರಕಲ್ಲು, ಕಕ್ಯಪದವು ಹೆಗ್ಗಣಗುಳಿ ರಸ್ತೆ,  ಮಾಣಿ ಗಡಿಯಾರ್ ಕಡೇಶಿವಾಲಯ ರಸ್ತೆ, ಬೆಳ್ತಂಗಡಿ ಉಪ್ಪಿನಂಗಡಿ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು ಎಂದು ಅಜಿಲಮೊಗರು ಮಸೀದಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News