ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿದಾರರ ಸಮಾವೇಶ

Update: 2022-01-14 18:00 GMT

ಬೈಂದೂರು, ಜ.14: ಅಖಿಲ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್ಗೆ ಸಂಯೋಜಿಸಲ್ಪಟ್ಟ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿದಾರರ ಸಮಾವೇಶವು ಜ.13ರಂದು ಬೈಂದೂರು ಸಿಐಟಿುು ಕಚೇರಿ ಸಭಾಂಗಣದಲ್ಲಿ ಜರಗಿತು.

ಸಮಾವೇಶವನ್ನು ಉದ್ಘಾಟಿಸಿದ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸೆಸ್ಸ್ ರೂಪದಲ್ಲಿ ಸಹಸ್ರಾರು ಕೋಟಿ ಹಣ ಸಂಗ್ರಹಿಸಲಾಗಿದೆ. ಕಾರ್ಮಿಕರ ಹಕ್ಕಿನ ಈ ಹಣದ ನೆರವಿನಿಂದ ಕಾಯಕ ಜೀವಿ ಕಟ್ಟಡ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ನಿವೃತ್ತಿ ವೇತನವನ್ನು ಕನಿಷ್ಟ ಮಾಸಿಕ 5000ರೂ. ಹೆಚ್ಚಿಸಲು ಕ್ರಮವಹಿಸಬೇಕು ಎಂು ಸರಕಾರವನ್ನು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ ಮಾತನಾಡಿ, ಕಟ್ಟಡ ಕಾರ್ಮಿಕರು ನಿವೃತ್ತಿ ವೇತನ ಕೋರಿ ಸಲ್ಲಿಸಿದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಜೀವಿತ ಪ್ರಮಾಣಪತ್ರ ಇತ್ಯಾದಿ ನೆಪ ಹೇಳಿ ಮಂಜೂರಾತಿ ಆದೇಶಕ್ಕೆ ತಡೆ ಮಾಡುವುದು ಸಲ್ಲದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೈಂದೂರು ತಾಲೂಕು ಕಟ್ಟಡ ಕಾರ್ಮಿಕ ಪಿಂಚಣಿ ದಾರರ ಸಂಘವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹೆರಿಯ ಪೂಜಾರಿ ಕಂಬದ ಕೋಣೆ, ಕಾರ್ಯದರ್ಶಿಯಾಗಿ ಮುಡೂರ ಪೂಜಾರಿ ಬಿಜೂರುಯವರನ್ನೊಳ ಗೊಂಡ 16 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನಾಗರತ್ನ ಪಡುವರಿ ಸ್ವಾಗತಿಸಿದರು. ರೊನಾಲ್ಡ್ ರಾಜೇಶ್ ಕ್ವಾಡ್ರಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News