ಪಂಚರಾಜ್ಯ ಚುನಾವಣೆ: ಜ.23ರವರೆಗೆ ರ‍್ಯಾಲಿ,ರೋಡ್‌ ಶೋಗೆ ನಿಷೇಧ

Update: 2022-01-15 18:08 GMT

ಹೊಸದಿಲ್ಲಿ,ಜ.15: ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ರ‍್ಯಾಲಿಗಳು ಹಾಗೂ ರೋಡ್ಶೋಗಳನ್ನು ಚುನಾವಣಾ ಆಯೋಗವು ಶನಿವಾರ ನಿಷೇಧಿಸಿದೆ. ಆದರೆ ರಾಜಕೀಯ ಪಕ್ಷಗಳು ಒಳಾಂಗಣಗಳಲ್ಲಿ 300 ಮಂದಿಯವರೆಗೆ ಅಥವಾ ಸಭಾಂಗಣದ ಸಾಮರ್ಥ್ಯದ ಶೇ.50ರಷ್ಟು ಸಭಿಕರೊಂದಿಗೆ ಸಭೆಗಳನ್ನು ನಡೆಸಲು ಅದು ಅನುಮತಿ ನೀಡಿದೆ.

ಕೋವಿಡ್19 ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಗೋವಾ, ಮಣಿಪುರ,ಪಂಜಾಬ್, ಉತ್ತರಪ್ರದೇಶ ಹಾಗೂ ಉತ್ತರಾಖಂಡ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಜನವರಿ 8ರಂದು ಪ್ರಕಟಿಸಿದ ಸಂದರ್ಭ ಚುನಾವಣಾ ಆಯೋಗವು ಎಲ್ಲಾ ಭೌತಿಕ ರ‍್ಯಾಲಿಗಳನ್ನು, ರೋಡ್ ಶೋಗಳನ್ನು, ಪಾದಯಾತ್ರೆಗಳು, ಮೆರವಣಿಗೆ ಹಾಗೂ ವಾಹನ ರ‍್ಯಾಲಿಗಳನ್ನು ನಿಷೇಧಿಸಿತ್ತು. 

ಶನಿವಾರದ (ಜನವರಿ 15)ವರೆಗೆ ಈ ನಿಷೇಧ ಜಾರಿಯಲ್ಲಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಆಗ ಘೋಷಿಸಿದ್ದರು. ಚುನಾವಣಾ ಆಯೋಗವು ಶನಿವಾರದಂದು ಕೇಂದ್ರ ಆರೋಗ್ಯ ಹಾಗೂ ಚುನಾವಣೆಗೆ ತೆರಳಲಿರುವ ಐದು ರಾಜ್ಯಗಳ ಕುಟುಂಬ ಕಲ್ಯಾಣ ಸಚಿವಾಲಯ , ಮುಖ್ಯ ಚುನಾವಣಾ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಕಾರ್ಯದರ್ಶಿಗಳ ಜೊತೆ ವಿಡಿಯೋಕಾನ್ಫರೆನ್ಸ್ ನಡೆಸಿತು. ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿನ ಪ್ರಸಕ್ತ ಪರಿಸ್ಥಿತಿ ಹಾಗೂ ಕೋವಿಡ್ ಸಾಂಕ್ರಾಮಿಕದ ಪ್ರವೃತ್ತಿಗಳ ಬಗ್ಗೆ ಸಭೆಯಲ್ಲಿ ಸಮಗ್ರ ಪರಾಮರ್ಶೆ ನಡೆಸಲಾಯಿತು’’ ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ.
     
ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ, ದ್ವಿತೀಯ ಹಾಗೂ ಬೂಸ್ಟರ್ ಡೋಸ್ಗಳನ್ನು ಪೂರ್ಣಗೊಳಿಸುವುದಕ್ಕಾಗಿ ನಡೆಸಲಾಗುವ ಲಸಿಕೆ ಅಭಿಯಾನಗಳ ಪ್ರತಿಯ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು. ಚುನಾವಣಾ ಆಯೋಗವು ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ( ಎಸ್ಡಿಎಂಎ)ಗಳ ನಿರ್ಬಂಧಗಳು ಹಾಗೂ ಜನತೆ ಸಭೆ ಸೇರುವುದಕ್ಕೆ ಸಂಬಂಧಿಸಿ ರಾಜ್ಯಗಳು ಜಾರಿಗೊಳಿಸಿರುವ ನಿರ್ದಿಷ್ಟ ಮಾರ್ಗದರ್ಶಿಸೂತ್ರಗಳನ್ನು ಕೂಡಾ ಆಯೋಗವು ಸಭೆಯಲ್ಲಿ ಪಾಲ್ಗೊಂಡಿತು.

ಚುನಾವಣಾ ಆಯೋಗವು ರೋಡ್ಶೋಗಳು,ಪಾದಯಾತ್ರೆಗಳು, ಸೈಕಲ್,ಬೈಕ್, ವಾಹನ ರ್ಯಾರಿಗಲು, ಮೆರವಣಿಗೆಗಳು ಹಾಗೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ರ್ಯಾಲಿಗಳನ್ನು ಜನವರಿ 22ರವರೆಗೆ ನಿಷೇಧಿಸಿದೆ.
   
ರಾಜಕೀಯ ಪಕ್ಷಗಳು ಕೋವಿಡ್ ನಿಯಮಾವಳಿಗಳ ಹಾಗೂ ಚುನಾವಣಾ ನೀತಿಸಂಹಿತೆಯನ್ನು ಅನುಸರಿಸುವುದನ್ನು ಖಾತರಿಪಡಿಸಬೇಕಾಗಿದೆ. ಜನವರಿ 8ರಂದು ಘೋಷಿಸಲಾದ ಎಲ್ಲಾ ನಿರ್ಬಂಧಗಳು ಹಾಗೂ ಮಾರ್ಗದರ್ಶಿ ಸೂತ್ರಗಳು ಮುಂದುವರಿಯಲಿದೆ ಎಂದು ಆಯೋಗ ತಿಳಿಸಿದೆ. ಈ ನಿಯಾಮವಳಿಗಳ ಅನುಸರಣೆಯಾಗುವುದನ್ನು ರಾಜ್ಯ ಹಾಗೂ ಜಿಲ್ಲಾ ಆಡಳಿತಗಳು ಖಾತರಿಪಡಿಸಿಕೊಳಬೇಕೆಂದು ಆಯೋಗವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News