ಭಟ್ಕಳ: ಸಮುದ್ರದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು
Update: 2022-01-16 17:14 IST
ಭಟ್ಕಳ: ಹೊನ್ನಾವರದ ಮಂಕಿ ಸಮುದ್ರಕ್ಕೆ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಮನೋಜ ಬಾಬು ನಾಯ್ಕ (15) ಹಾಗೂ ದರ್ಶನ ಉದಯ ನಾಯ್ಕ (16) ಎಂದು ಗುರುತಿಸಲಾಗಿದೆ. ಮೃತರು ನಾಲೈದು ಮಕ್ಕಳೊಂದಿಗೆ ಮಂಕಿ ತಾಳಮಕ್ಕಿ ಬಳಿ ಸಮುದ್ರಕ್ಕೆ ಈಜಲು ತೆರಳಿದ್ದು, ಇವರಿಬ್ಬರೂ ಸಮೀಪದ ಕನ್ನಡ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.
ಮೊದಲು ಮನೋಜ ಸಮುದ್ರದ ಸುಳಿಗೆ ಸಿಕ್ಕಾಗ ಆತನನ್ನು ರಕ್ಷಿಸಲು ದರ್ಶನ ಹೋಗಿದ್ದು, ಇಬ್ಬರು ಸಮುದ್ರ ಸುಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.