ಸರಳ, ಸಂಪ್ರದಾಯಿಕ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆ

Update: 2022-01-16 13:56 GMT

ಉಡುಪಿ, ಜ.16: ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಚರ್ತುಥ ಪರ್ಯಾಯ ಮಹೋತ್ಸವ ವನ್ನು ಸ್ವಾಮೀಜಿಯ ಸೂಚನೆಯಂತೆ ಸರಳ ಹಾಗೂ ಸಂಪ್ರದಾಯಿಕವಾಗಿ ನಡೆಸಲು ಪರ್ಯಾಯ ಮಹೋತ್ಸವ ಸಮಿತಿ ಸಿದ್ಧತೆ ನಡೆಸಿದೆ.

ಪರ್ಯಾಯ ಮೆರವಣಿಗೆ ಸಾಗುವ ರಸ್ತೆಯುದಕ್ಕೂ ದೀಪಾಲಂಕಾರಗಳನ್ನು ಮಾಡಲಾಗಿದ್ದು, ಬಂಟಿಗ್ಸ್ ಸೇರಿದಂತೆ ಬಗೆಬಗೆಯ ಅಲಂಕಾರದಿಂದ ನಗರ ಕಂಗೋಳಿಸುತ್ತಿದೆ. ಶ್ರೀಕೃಷ್ಣ ಮಠ, ರಥಬೀದಿ ಅಲಂಕಾರದಿಂದ ನಗರದ ಸೌಂರ್ದಯ ಇನ್ನಷ್ಟು ಹೆಚ್ಚಾಗಿದೆ.

ಈಗಾಗಲೇ ನಿಗದಿಪಡಿಸಿದ್ದ 40 ಸ್ತಬ್ದಚಿತ್ರಗಳು ಮತ್ತು ಕಲಾ ತಂಡಗಳ ಸಂಖ್ಯೆ ಯನ್ನು ಸ್ವಾಮೀಜಿಯ ಸೂಚನೆಯಂತೆ ಎಂಟಕ್ಕೆ ಇಳಿಸಲಾಗಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಚಂಡೆ ಬಿರುವಾವಳಿಗಳೊಂದಿಗೆ ಸರಳ ವಾಗಿ ಮೆರವಣಿಗೆ ನಡೆಸಲಾಗುವುದು ಎಂದು ಸಮಿತಿಯ ಪ್ರಧಾನ ಕಾರ್ಯ ದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ತಿಳಿಸಿದ್ದಾರೆ.

9 ಕಡೆ ಎಲ್‌ಇಡಿ ಟಿವಿ

ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಥಬೀದಿಯಲ್ಲಿ ನಡೆಯುವ ಜ.17ರ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ 10ಗಂಟೆಯೊಳಗೆ ಮುಗಿಸಲಾಗುವುದು. ರಥಬೀದಿ ಸೇರಿದಂತೆ ನಗರದ ಒಟ್ಟು 9 ಕಡೆಗಳಲ್ಲಿ ಬಹೃತ್ ಎಲ್‌ಇಡಿ ಟಿವಿ ಪರದೆಗಳನ್ನು ಆಳವಡಿಸಿ ಪರ್ಯಾಯ ನೇರಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಸರಕಾರದ ಆದೇಶಕ್ಕೆ ಬೆಲೆ ಕೊಟ್ಟು ಜನರಿಗೆ ತೊಂದರೆ ಆಗದಂತೆ ಸ್ವಾಮೀಜಿ ಸೂಚನಯಂತೆ ಸರಳ ಸಾಪ್ರಾಂದ್ರಾಯಿಕ ಪರ್ಯಾಯಕ್ಕೆ ವ್ಯವಸ್ಥ್ಥೆ ಮಾಡಲಾಗಿದೆ. ಜ.18ರ ಅನ್ನಸಂತರ್ಪಣೆಯಲ್ಲಿ ಸೀಮಿತ ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಸಿಕಾ ಕೇಂದ್ರ ಸ್ಥಾಪನೆ

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಉಚಿತ ಚಿಕಿತ್ಸಾಲಯದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಒಂದು ಕೋವಿಡ್ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ.

ಪರ್ಯಾಯ ವೆುರವಣಿಗೆ ಹಿನ್ನೆಲೆಯಲ್ಲಿ ಜ.17ರಂದು ರಾತ್ರಿ ಹೆಚ್ಚು ಜನ ಸೇರುವುದರಿಂದ ನಗರದಲ್ಲಿ ಇನ್ನೊಂದು ಲಸಿಕಾ ಕೇಂದ್ರ ಸ್ಥಾಪಿಸುವ ಯೋಜನೆ ಇದೆ. ಅದೇ ರೀತಿ ತುರ್ತು ಅಗತ್ಯಕ್ಕಾಗಿ ಆರು ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಬಿಗಿ ಪೊಲೀಸ್ ಭದ್ರತೆ

ಪರ್ಯಾಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣು ವರ್ಧನ್ ಉಡುಪಿ ಶ್ರೀಕೃಷ್ಣ ಮಠ, ರಥಬೀದಿ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

70ಕ್ಕೂ ಅಧಿಕ ಡಿವೈಎಸ್ಪಿ, ಪೊಲೀಸ್ ನಿರೀಕ್ಷಕರು, ಉಪನಿರೀಕ್ಷಕರು, 60 ಎಎಸ್ಸೈ, 60 ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ಗಳು, 650 ಹೆಡ್‌ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್‌ಗಳು, ಏಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎರಡು ಕೆಎಸ್‌ಆರ್‌ಪಿ, ನಾಲ್ಕು ವಿದ್ವಂಸಕ ನಿಗ್ರಹ ಪರಿಶೀಲನಾ ತಂಡ ಮತ್ತು ಒಂದು ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸ ಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ರದ್ದು

ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಬಾರಿ ನಗರದ ವಿವಿಧ ಕಡೆ ನಡೆಯುತ್ತಿದ್ದ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವುದರಿಂದ ಎಲ್ಲ ಕಾರ್ಯಕ್ರಮ ಗಳು ರದ್ದುಗೊಂಡಿವೆ.

ಪ್ರತಿಬಾರಿ ಕಿನ್ನಿಮುಲ್ಕಿ, ಸರ್ವಿಸ್ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್, ಜಟ್ಕಾ ಸ್ಟಾಂಡ್, ಗೀತಾಂಜಲಿ ಬಳಿ, ಮಿತ್ರಾ ಆಸ್ಪತ್ರೆ ಬಳಿ, ಪಿಪಿಸಿ ಸಭಾಂಗಣ ದಲ್ಲಿ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿತ್ತು. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

''ಪರ್ಯಾಯ ಮಹೋತ್ಸವದ ಸಂಬಂಧ ಈಗಾಗಲೇ ಸಚಿವರ ಉಪಸ್ಥಿತಿ ಯಲ್ಲಿ ಸಮಿತಿಯವರೊಂದಿಗೆ ಸಭೆ ನಡೆಸಲಾಗಿದೆ. ಸ್ವಾಮೀಜಿ ಸರಳ ಹಾಗೂ ಸಾಂಪ್ರಾದಾಯಿಕವಾಗಿ ಆಚರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಸಮಿತಿಯವರು ಸರಳ ವಾಗಿ ಆಚರಿಸುತ್ತಾರೆ. ಈ ಕುರಿತು ಈವರೆಗೆ ಸರಕಾರ ದಿಂದ ಯಾವುದೇ ವಿಶೇಷ ಆದೇಶ ಬಂದಿಲ್ಲ. ಜ.17ರಂದು ರಾತ್ರಿ ನಗರದಲ್ಲಿ ನಡೆಯುವ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ''

-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News