ಯುವತಿ ನಾಪತ್ತೆ

Update: 2022-01-17 15:23 GMT

ಉಡುಪಿ, ಜ.17: ಮದುವೆ ಸಮಾರಂಭದ ಪ್ರಯುಕ್ತ ಜ.16ರಂದು ಕೆಮ್ಮಣ್ಣು ವಿನ ಲಿಟ್ಲ್ ಫ್ಲವರ್ ಸಭಾಭವನಕ್ಕೆ ತೆರಳಿದ್ದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ನಿಮ್ರಾಝ್ (19) ಎಂಬ ಯುವತಿ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ: 0820-2537999, ಪಿ.ಎಸ್.ಐ ಮೊ.ನಂ: 9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರು ಮೊ.ನಂ: 9480805430ಗೆ ಮಾಹಿತಿ ನೀಡುವಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News