ನಾಯಕತ್ವ ಯಾರ ಜನ್ಮಸಿದ್ಧ ಹಕ್ಕೂ ಅಲ್ಲ, ಚೆನ್ನಾಗಿ ಆಡುವುದನ್ನು ಮುಂದುವರಿಸಬೇಕು: ಗೌತಮ್ ಗಂಭೀರ್

Update: 2022-01-18 07:02 GMT

ಹೊಸದಿಲ್ಲಿ: ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ ರನ್ ಗಳಿಸುವತ್ತ ಗಮನ ಹರಿಸಬೇಕು ಹಾಗೂ  ಅದು 'ಹೆಚ್ಚು ಮುಖ್ಯ' ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದರು.

"ನಾಯಕತ್ವ ಯಾರ ಜನ್ಮಸಿದ್ಧ ಹಕ್ಕು ಅಲ್ಲ" ಎಂದು ಹೇಳಿದ ಗಂಭೀರ್, ಎಂಎಸ್ ಧೋನಿ ಕೂಡ ತಮ್ಮ ನಾಯಕತ್ವವನ್ನು ತ್ಯಜಿಸಿದರು  ಹಾಗೂ  ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಆಡಿದ್ದಾರೆ ಎಂದು ವಿವರಿಸಿದರು.

ಸ್ಟಾರ್ ಸ್ಪೋರ್ಟ್ಸ್‌ನ ಗೇಮ್ ಪ್ಲಾನ್ ಶೋನಲ್ಲಿ ಮಾತನಾಡಿದ ಭಾರತದ ಮಾಜಿ ಆರಂಭಿಕ ಆಟಗಾರ, "ನೀವು ಇನ್ನೇನು ನೋಡಲು ಬಯಸುತ್ತೀರಿ? ನನಗೆ ಗೊತ್ತಿಲ್ಲ. ನಾಯಕತ್ವವು ಯಾರ ಜನ್ಮಸಿದ್ಧ ಹಕ್ಕು ಅಲ್ಲ ಎಂದು ನಾನು ಭಾವಿಸುತ್ತೇನೆ. ಎಂ.ಎಸ್. ಧೋನಿಯಂತಹ ಆಟಗಾರನೂ  ತಮ್ಮ ನಾಯಕತ್ವದ ಬ್ಯಾಟನ್ ಅನ್ನು ವಿರಾಟ್ ಕೊಹ್ಲಿಗೆ ನೀಡಿದ್ದಾರೆ. ಧೋನಿ ಅವರು ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿಯೂ ಆಡಿದ್ದಾರೆ. ಅವರು ಮೂರು ಟ್ರೋಫಿಗಳನ್ನು, ಮೂರು ಅಥವಾ ನಾಲ್ಕು IPL ಟ್ರೋಫಿಗಳನ್ನು ಗೆದ್ದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2 ಅಂತರದ ಸೋಲಿನ ನಂತರ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಟ್ವೆಂಟಿ- 20 ವಿಶ್ವಕಪ್ ನಂತರ ಅವರು  ಟ್ವೆಂಟಿ 20 ನಾಯಕತ್ವವನ್ನು ತ್ಯಜಿಸಿದ್ದರು ಮತ್ತು ಆನಂತರ  ಏಕದಿನ ನಾಯಕತ್ವದಿಂದ ಅವರನ್ನು ತೆಗೆದುಹಾಕಲಾಯಿತು. ಬಿಸಿಸಿಐ ಕಳೆದ ವರ್ಷ ಡಿಸೆಂಬರ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ಭಾರತದ ಪೂರ್ಣಾಕಾಲಿಕ ಸೀಮಿತ ಓವರ್ ತಂಡದ ನಾಯಕ ಎಂದು ಘೋಷಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News