ಭಾರತವು ಸಾಲದ ಸುಳಿಯಲ್ಲಿ ಸಿಲುಕಿದೆ, ಯುವಜನರು ಭ್ರಮನಿರಸನಗೊಂಡಿದ್ದಾರೆ: ಜಾಗತಿಕ ಸಮೀಕ್ಷೆ

Update: 2022-01-18 17:43 GMT

 ಹೊಸದಿಲ್ಲಿ,ಜ.18: ಹವಾಮಾನ ಬದಲಾವಣೆ ನಿಷ್ಕ್ರಿಯತೆಯು ಜಾಗತಿಕ ನಾಯಕರನ್ನು ಮತ್ತು ನಿರ್ಧಾರ ರೂಪಕರನ್ನು ಚಿಂತೆಗೀಡು ಮಾಡಿದೆ. ಇದು ಪ್ರದೇಶಗಳಾದ್ಯಂತ ವಿವಿಧ ಮಟ್ಟಗಳ ಪರಿಣಾಮಗಳೊಂದಿಗೆ ಶೇ.4ರಿಂದ ಶೇ.18ರಷ್ಟು ಜಾಗತಿಕ ಜಿಡಿಪಿ ನಷ್ಟಕ್ಕೆ ಕಾರಣವಾಗಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯು ಹೇಳಿದೆ.

ತನ್ನ ‘ಜಾಗತಿಕ ಅಪಾಯ ವರದಿ 2022’ರಲ್ಲಿ ಪ್ರತಿಯೊಂದು ದೇಶದಂತೆ ಭಾರತಕ್ಕೂ ಐದು ಪ್ರಮುಖ ಅಪಾಯಗಳನ್ನು ಅದು ಪಟ್ಟಿ ಮಾಡಿದೆ. ಅಂತರ್ರಾಜ್ಯ ಸಂಬಂಧಗಳಲ್ಲಿ ಬಿರುಕು,ಸಾಲದ ಬಿಕ್ಕಟ್ಟು,ಯುವಜನರಲ್ಲಿ ವ್ಯಾಪಕ ಭ್ರಮನಿರಸನ,ತಂತ್ರಜ್ಞಾನ ಆಡಳಿತದ ವೈಫಲ್ಯ ಮತ್ತು ಡಿಜಿಟಲ್ ಅಸಮಾನತೆಗಳನ್ನು ಭಾರತದ ಐದು ಮುಖ್ಯ ಅಪಾಯಗಳೆಂದು ಡಬ್ಲುಇಎಫ್ನ ಎಕ್ಸಿಕ್ಯೂಟಿವ್ ಒಪೀನಿಯನ್ ಸರ್ವೆಯು ಬೆಟ್ಟು ಮಾಡಿದೆ.
ಸಮೀಕ್ಷೆಗಾಗಿ 124 ದೇಶಗಳ 12,000ಕ್ಕೂ ಅಧಿಕ ರಾಷ್ಟ್ರಮಟ್ಟದ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು.

ವರದಿಯ ಪ್ರಕಾರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಸರಕಾರಗಳಿಂದ ಪರಿಣಾಮಕಾರಿ ಕ್ರಮಗಳ ಅನುಷ್ಠಾನದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕಳವಳವು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವಲ್ಲಿ ವಿಶ್ವದ ಸಾಮರ್ಥ್ಯದಲ್ಲಿ ನಂಬಿಕೆಯ ಕೊರತೆಯನ್ನು ಬಹಿರಂಗಗೊಳಿಸಿದೆ. ಇದಕ್ಕೆ ಆಳವಾಗಿರುವ ಸಾಮಾಜಿಕ ಬಿರುಕುಗಳು ಮತ್ತು ಆರ್ಥಿಕ ಅಪಾಯಗಳೂ ಕಾರಣವಾಗಿವೆ ಎಂದು ವರದಿಯು ಹೇಳಿದೆ.

ಕೋವಿಡ್ ಸಾಂಕ್ರಾಮಿಕವು ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟು ಹವಾಮಾನ ಬದಲಾವಣೆಯನ್ನು ತಡೆಯುವ ಪ್ರಯತ್ನಗಳ ವಿಳಂಬದ ಅಪಾಯವನ್ನುಂಟು ಮಾಡಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News