ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದ ರಾಕೇಶ್ ಟಿಕಾಯತ್

Update: 2022-01-19 05:09 GMT

ಪ್ರಯಾಗರಾಜ್: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಭಾರತೀಯ ಕಿಸಾನ್ ಯೂನಿಯನ್ ರಾಜಕೀಯ ಪಕ್ಷಕ್ಕೆ ಬೆಂಬಲವನ್ನು ನೀಡುತ್ತದೆ ಎಂಬ ವರದಿಗಳನ್ನು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ನಿರಾಕರಿಸಿದ್ದಾರೆ.

ಮಂಗಳವಾರ  ಪರೇಡ್ ಗ್ರೌಂಡ್‌ನಲ್ಲಿ ರೈತರ ಮೂರು ದಿನಗಳ 'ಚಿಂತನ ಶಿಬಿರ'ದಲ್ಲಿ ಪಾಲ್ಗೊಳ್ಳಲು ಮಾಘಮೇಳಕ್ಕೆ ಆಗಮಿಸಿದ ಟಿಕಾಯತ್ "ಪಂಚರಾಜ್ಯಗಳ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ" ಎಂದು ಸ್ಷಷ್ಟಪಡಿಸಿದರು.

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ-ಸಮಾಜವಾದಿ ಪಕ್ಷದ ಮೈತ್ರಿಗೆ ಬೆಂಬಲ ನೀಡುವಂತೆ ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ಮನವಿ ಮಾಡಿದ ನಂತರ ರಾಕೇಶ್ ಟಿಕಾಯತ್ ಅವರ ಹೇಳಿಕೆ ಬಂದಿದೆ. ಆದಾಗ್ಯೂ, ಸಿಸೌಲಿಯಲ್ಲಿ ಬಿಜೆಪಿಯ ಸಂಜೀವ್ ಬಲ್ಯಾನ್ ಅವರೊಂದಿಗಿನ ಸಭೆಯ ಕೆಲವು ಗಂಟೆಗಳ ನಂತರ ಬಿಕೆಯು ಮುಖ್ಯಸ್ಥರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು ಹಾಗೂ ನಾನು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಹೇಳಿದರು.

"ರೈತರು ಮತ್ತು ಸಂಘಟನೆಗೆ ಸಂಬಂಧಿಸಿದ ವಿಷಯಗಳನ್ನು ಮೂರು ದಿನಗಳ ಚಿಂತನ ಮಂಥನದಲ್ಲಿ ಚರ್ಚಿಸಲಾಗಿದೆ" ಎಂದು ರಾಕೇಶ್ ಟಿಕಾಯತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News