ರೈತರ ಕಾರ್ಮಿಕರ ಸಖ್ಯತೆಯ ಹೋರಾಟದಿಂದ ದೇಶ ಉಳಿಸಲು ಸಾಧ್ಯ: ಎಚ್.ನರಸಿಂಹ

Update: 2022-01-19 15:19 GMT

ಕುಂದಾಪುರ, ಜ.19: 1982ರಂದು ಕಾರ್ಮಿಕ ವರ್ಗವು ರೈತರ ಬೇಡಿಕೆಗಳಿ ಗಾಗಿ ಮೊದಲ ಸಾರ್ವತ್ರಿಕ ಮುಷ್ಕರಕ್ಕೆ ಕರೆಕೊಟ್ಟು ಈ ದೇಶದ ಬಂಡವಾಳ ಶಾಹಿ ಸರಕಾರವನ್ನು ನಡುಗಿಸಿತು. ಇಂದಿಗೆ ನಲವತ್ತು ವರ್ಷಗಳ ಹಿಂದೆ ನಡೆದ ಹೋರಾಟದಲ್ಲಿ ಹತ್ತು ಜನ ಕೃಷಿಕೂಲಿಕಾರರು ಪ್ರಭುತ್ವದ ಕ್ರೂರತೆಯಿಂದ ಹುತಾತ್ಮರಾದರು ಎಂದು ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ ಹೇಳಿದ್ದಾರೆ.

ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಬುಧವಾರ ನಡೆದ ರೈತ, ಕೂಲಿಕಾರ, ಕಾರ್ಮಿಕರ ಸಖ್ಯತೆಯ ದಿನದ ಕಾರ್ಯಕ್ರಮದ ಬೇಡಿಕೆಗಳಿಗಾಗಿ ಒತ್ತಾಯಿಸುವ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ನಲವತ್ತು ವರ್ಷಗಳ ಸುಧೀರ್ಘ ಮುಷ್ಕರದಿಂದ ಹಲವಾರು ಕಾನೂನು ಬದ್ಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ. ಆದರೆ ಮೋದಿ ಸರಕಾರ ಆಡಳಿತದಿಂದ ಇಂದು ಕಾನೂನು ಬದ್ಧ ಸೌಲಭ್ಯಗಳು ತಿದ್ದುಪಡಿಯಾಗಿ ಎಲ್ಲಾ ಜನವಿಭಾಗಗಳು ಸಂಕಷ್ಟಕೊಳಗಾಗುತ್ತಿದ್ದಾರೆ. ಇದರ ವಿರುದ್ಧ ಫೆಬ್ರವರಿ 23-24 ರಂದು ಎರಡು ದಿನಗಳ ಕಾರ್ಮಿಕರ 22ನೇ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಹಾಬಲ ವಡೇರಹೋಬಳಿ, ಸುರೇಶ್ ಕಲ್ಲಾಗರ, ಚಂದ್ರ ಶೇಖರ, ಸಂತೋಷ ಹೆಮ್ಮಾಡಿ, ಜಿ.ಡಿ ಪಂಜು, ಬಲ್ಕೀಸ್, ರಾಜು ದೇವಾಡಿಗ, ಪ್ರಕಾಶ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News