ಬೆಂಗಳೂರು: ನಕಲಿ ಇ-ವೇ ಬಿಲ್ ಜಾಲವನ್ನು ಭೇದಿಸಿದ ವಾಣಿಜ್ಯ ತೆರಿಗೆ ಇಲಾಖೆ

Update: 2022-01-20 14:05 GMT

ಬೆಂಗಳೂರು, ಜ. 20: ಅಸ್ತಿತ್ವದಲ್ಲಿಲ್ಲದ ವರ್ತಕರ ಜಿಎಸ್ಟಿ ನೋಂದಣಿಗಳನ್ನು ತಕ್ಷಣದಿಂದ ರದ್ದುಗೊಳಿಸುವ ಹಾಗೂ ಆದಾಯ ತೆರಿಗೆ ಇಲಾಖೆ, ಬ್ಯಾಂಕ್‍ಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮುಂತಾದ ಇತರ ಏಜೆನ್ಸಿಗಳಿಂದ ಪುರಾವೆಗಳನ್ನು ಸಂಗ್ರಹಿಸಿ ಅಂತಹವರ ಮೇಲೆ ಕಾನೂನಿನನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳೀಸಿದೆ.

ಕೆಲವು ವರ್ತಕರು ಸರಕುಗಳ ನಿಜವಾದ ಪೂರೈಕೆ ಮಾಡದೇ ನಕಲಿ ಇ-ವೇ ಬಿಲ್‍ಗಳನ್ನು ಮತ್ತು ಇನ್‍ವಾಯ್ಸ್‍ಗಳನ್ನು ತಯಾರಿಸಿ ಸರಕಾರಕ್ಕೆ ತೆರಿಗೆ ವಂಚಿಸಿ ಹೂಡುವಳಿ ತೆರಿಗೆಯನ್ನು ಫಲಾನುಭವಿಗಳಿಗೆ ರವಾನಿಸುವ ದುರುದ್ದೇಶದಿಂದ ಕೃತಕ ದಾಖಲೆಗಳನ್ನು ನೀಡಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ನೋಂದಣಿ ಪಡೆದು ತೆರಿಗೆ ವಂಚನೆ ಜಾಲಗಳನ್ನು ಸೃಷ್ಟಿಸಿರುತ್ತಾರೆಂಬ ಖಚಿತ ಮಾಹಿತಿ ಅನ್ವಯ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಇ-ವೇ ಬಿಲ್ ಮತ್ತು ಜಿಎಸ್ಟಿ ಪ್ರೈಮ್  ಪೋರ್ಟಲ್‍ಗಳಲ್ಲಿ ಲಭ್ಯವಿರುವ ದತ್ತಾಂಶವನ್ನು ಆಧರಿಸಿ ಕಾರ್ಯತಂತ್ರವನ್ನು ರೂಪಿಸಿ 3 ತಿಂಗಳಲ್ಲಿ ರಾಜ್ಯಾದ್ಯಂತ ತೀವ್ರ ತಪಾಸಣೆ ನಡೆಸಿರುತ್ತಾರೆ.

ಶಂಕಿತ ವರ್ತಕರು ಇತ್ತೀಚೆಗೆ ನೋಂದಣಿ ಹೊಂದಿದ್ದು, ಜಿಎಸ್ಟಿ ಪೋರ್ಟಲ್‍ನಲ್ಲಿ ನಕಲಿ/ಕೃತಕ ದಾಖಲೆಗಳನ್ನು ಅಪ್‍ಲೋಡ್ ಮಾಡುವ ಮೂಲಕ ಜಿಎಸ್ಟಿ ನೋಂದಣಿಯನ್ನು ಪಡೆದಿರುವುದು ಹಾಗೂ ಘೋಷಿತ ವ್ಯಾಪಾರ ಸ್ಥಳದಲ್ಲಿ ಅಸ್ತಿತ್ವದಲ್ಲಿಲ್ಲದೇ ಇರುವುದು ತಪಾಸಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಮೂರು ತಿಂಗಳಲ್ಲಿ ಇಲಾಖೆಯು 11,542 ಇ-ವೇ ಬಿಲ್ಲುಗಳ ಮುಖಾಂತರ ಒಟ್ಟು 755.17 ಕೋಟಿ ರೂ. ಮಾರಾಟ ವಹಿವಾಟು ಹಾಗೂ 147,67 ಕೋಟಿ ರೂ.ನಕಲಿ ಹೂಡುವಳಿ ತೆರಿಗೆ ಕ್ಷೇಮು ಮಾಡಿದ 172 ಅಸ್ತಿತ್ವದಲ್ಲಿ ಇಲ್ಲದೆ ಇರುವ ನಕಲಿ ತೆರಿಗೆದಾರರನ್ನು ತಪಾಸಣೆ ನಡೆಸಿ ಅವರ ನೋಂದಣಿಯನ್ನು ರದ್ದುಗೊಳಿಸಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News