ಕೊರೋನ ಪಾಸಿಟಿವ್ ಹಿನ್ನೆಲೆ; ದ.ಕ.ಜಿಲ್ಲೆಯ 10 ಶಾಲೆ, 2 ಪಿಯು ಕಾಲೇಜು ತಾತ್ಕಾಲಿಕ ಬಂದ್

Update: 2022-01-20 15:30 GMT

ಮಂಗಳೂರು, ಜ. 20: ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ 10 ಶಾಲೆಗಳು ಮತ್ತು ಎರಡು ಪಿಯು ಕಾಲೇಜುಗಳು ಒಂದು ವಾರದ ಮಟ್ಟಿಗೆ ಸ್ಥಗಿತವಾಗಿದೆ.

ಗುರುವಾರ ಒಂದೇ ದಿನ 32 ವಿದ್ಯಾರ್ಥಿಗಳಲ್ಲಿ ಹಾಗೂ 7 ಶಿಕ್ಷಕರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ 288 ವಿದ್ಯಾರ್ಥಿಗಳು ಹಾಗೂ 43 ಶಿಕ್ಷಕರು ಕೋವಿಡ್ ಪಾಸಿಟಿವ್ ಆಗಿದ್ದಾರೆ.

ಗುರುವಾರ ಒಂದೇ ದಿನ ಐದು ಶಾಲೆಗಳನ್ನು ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ಅದರಲ್ಲಿ ಮಂಗಳೂರಿನಲ್ಲಿ ಒಂದು, ಪೆರ್ಮನ್ನೂರಿನ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರಿನಲ್ಲಿ ಮೂರು ಶಾಲೆಗಳು ಸೇರಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬುಧವಾರ ಎಡಪದವಿನ ಪಿಯು ಕಾಲೇಜಿನ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದ್ದರೆ, ಗುರುವಾರ ನಗರದ ಬೆಂದುರ್‌ವೆಲ್‌ನ ಕಾಲೇಜಿನಲ್ಲಿ ಐವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದೆ. ಹಾಗಾಗಿ ಈ ಕಾಲೇಜುಗಳನ್ನು ಕೂಡ ಒಂದು ವಾರದ ಮಟ್ಟಿಗೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.

ಈ ಮಧ್ಯೆ ಜಿಲ್ಲೆಯ ನರ್ಸಿಂಗ್, ಪ್ಯಾರಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News