ಯುವ ಜನತಾದಳ ದ.ಕ.ಜಿಲ್ಲೆ ವತಿಯಿಂದ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
Update: 2022-01-22 18:38 IST
ಮಂಗಳೂರು : ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯಕ್ತ ಯುವ ಜನತಾದಳ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನಗರದಲ್ಲಿರುವ ಹಲವು ನಿರಾಸಕ್ತರಿಗೆ ಇಂದು ಆಹಾರ ನೀಡಿ ಆಚರಿಸಲಾಯಿತು.
ಈ ಸಂದರ್ಭ ಯುವ ಜನತಾದಳ ರಾಜ್ಯ ನಾಯಕ ಫೈಝಲ್ ರಹ್ಮಾನ್, ಜಿಲ್ಲಾ ನಾಯಕರು ಆಸಿಫ್ ಕುದ್ರೋಳಿ, ರತೀಶ್ ಕರ್ಕೇರ, ಫ್ರಾನ್ಸಿಸ್, ಸವಾಝ್ ಬಂಟ್ವಾಳ, ಸುಮಿತ್ ಸುವರ್ಣ, ರಾಶ್ ಬ್ಯಾರಿ, ನಝೀರ್ ಖಂದಕ್, ರೋಹಿತ್, ತಮೀಮ್ ಕುತ್ತಾರ್, ಅರಾಫತ್ ಹಾಗು ಇತರರು ಉಪಸ್ಥಿತರಿದ್ದರು.