ಪಾಕ್ ಸುಪ್ರೀಂಕೋರ್ಟ್ ನ ಪ್ರಪ್ರಥಮ ನ್ಯಾಯಾಧೀಶೆಯಾಗಿ ಆಯಿಷಾ ಮಲಿಕ್ ಪ್ರಮಾಣವಚನ

Update: 2022-01-24 17:33 GMT
ಆಯಿಷಾ ಮಲಿಕ್

ಇಸ್ಲಮಾಬಾದ್, ಜ.24: ಪಾಕಿಸ್ತಾನದ ಸುಪ್ರೀಂಕೋರ್ಟ್‌ನ ನ್ಯಾಯಾಧೀಶೆಯಾಗಿ ಆಯಿಷಾ ಮಲಿಕ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದು ಇದರೊಂದಿಗೆ ಆ ದೇಶದ ಸುಪ್ರೀಂಕೋರ್ಟ್‌ಗೆ ನೇಮಕಗೊಂಡ ಪ್ರಪ್ರಥಮ ಮಹಿಳಾ ನ್ಯಾಯಾಧೀಶೆಯಾಗಿ ದಾಖಲೆ ಬರೆದಿದ್ದಾರೆ. 

ಇಸ್ಲಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲಿಕ್ ಪ್ರಮಾಣವಚನ ಸ್ವೀಕರಿಸಿದ್ದು ಅವರು ಸುಪ್ರೀಂಕೋರ್ಟ್‌ನ 16 ಪುರುಷ ಸಹೋದ್ಯೋಗಿಗಳ ನ್ಯಾಯ ಪೀಠದ ಸದಸ್ಯೆಯಾಗಿ ಸೇರ್ಪಡೆಗೊಂಡಿದ್ದಾರೆ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಚಾರಿತ್ರಿಕ ಘಟನೆಯಾಗಿದೆ ಮತ್ತು ದೊಡ್ಡ ಹೆಜ್ಜೆಯನ್ನು ಮುಂದಿರಿಸಿದಂತಾಗಿದೆ ಎಂದು ನ್ಯಾಯವಾದಿ ಹಾಗೂ ಮಹಿಳಾ ಹಕ್ಕುಗಳ ಕಾರ್ಯಕರ್ತೆ ನಿಘಾತ್ ದಾದ್ ರನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ಹಾರ್ವರ್ಡ್ ವಿವಿಯಲ್ಲಿ ಶಿಕ್ಷಣ ಪಡೆದಿರುವ ಮಲಿಕ್, ಕಳೆದ 2 ದಶಕಗಳಿಂದ ಲಾಹೋರ್ ಹೈಕೋರ್ಟ್‌ನ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News