ತೈವಾನ್ನತ್ತ 39 ಯುದ್ಧವಿಮಾನ ರವಾನಿಸಿದ ಚೀನಾ

Update: 2022-01-24 18:07 GMT
ಸಾಂದರ್ಭಿಕ ಚಿತ್ರ(photo:PTI)

ತೈಪೆ, ಜ.24: ಚೀನಾವು ರವಿವಾರ ರಾತ್ರಿ ತೈವಾನ್ನತ್ತ 39 ಯುದ್ಧವಿಮಾನಗಳನ್ನು ರವಾನಿಸಿದ್ದು ಇದು ಹೊಸ ವರ್ಷದಲ್ಲಿ ಚೀನಾ ನಡೆಸಿದ ಬೃಹತ್ ಉಪಕ್ರಮವಾಗಿದೆ. ತಕ್ಷಣ ತೈವಾನ್ ಕೂಡಾ ಜೆಟ್ ವಿಮಾನಗಳ ಮೂಲಕ ಪ್ರತ್ಯುತ್ತರ ನೀಡಿದೆ ಎಂದು ತೈವಾನ್‌ನ ರಕ್ಷಣಾ ಇಲಾಖೆ ಹೇಳಿದೆ.

24 ಜೆ-16 ಯುದ್ಧವಿಮಾನ, 10 ಜೆ-10 ಯುದ್ಧವಿಮಾನ ಹಾಗೂ ಇದಕ್ಕೆ ಬೆಂಗಾವಲಾಗಿ ಯುದ್ಧವಿಮಾನ ಮತ್ತು ಇಲೆಕ್ಟ್ರಾನಿಕ್ ಯುದ್ಧವಿಮಾನಗಳ ದಂಡನ್ನು ಚೀನಾ ರವಾನಿಸಿದೆ. ಇವುಗಳನ್ನು ವಾಯುರಕ್ಷಣಾ ವಿಭಾಗದ ರೇಡಾರ್‌ಗಳು ಪತ್ತೆಹಚ್ಚಿದ ಬಳಿಕ ತೈವಾನ್ ವಾಯುಪಡೆ ಜೆಟ್ವಿಮಾನಗಳ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ. 

ತೈವಾನ್‌ನ ನೈಋತ್ಯ ಪ್ರಾಂತದ ಮೇಲೆ ಚೀನಾದ ವಿಮಾನಗಳು ಬಹುತೇಕ ಪ್ರತೀ ದಿನ ಹಾರಾಟ ನಡೆಸುತ್ತಿವೆ. ಇದು ತನ್ನ ವಾಯುಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂಬ ತೈವಾನ್‌ನ ವಾದಕ್ಕೆ ಚೀನಾ ಕಿವಿಗೊಡುತ್ತಿಲ್ಲ. 1949ರಲ್ಲಿ ನಡೆದ ಅಂತರ್ಯುದ್ಧದ ಬಳಿಕ ತೈವಾನ್ ಮತ್ತು ಚೀನಾ ವಿಭಜನೆಗೊಂಡಿದ್ದರೂ ತೈವಾನ್ ದ್ವೀಪ ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿದೆ ಎಂದು ಚೀನಾ ಪ್ರತಿಪಾದಿಸುತ್ತಿದೆ. ಮತ್ತು ತೈವಾನ್ ಅನ್ನು ಅಂತರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕವಾಗಿಸಲು ಸೇನೆ ಮತ್ತು ರಾಜತಾಂತ್ರಿಕ ವಿಧಾನಗಳಿಂದ ಒತ್ತಡ ಹೇರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News