ಭಾರತದಲ್ಲಿ ಅವನತಿಯ ಶಕುನಗಳು

Update: 2022-01-25 06:56 GMT

ಅಮರ್‌ಜವಾನ್ ಜ್ಯೋತಿಯ ಜ್ವಾಲೆಯನ್ನು ನಂದಿಸಿ ಆ ಮೃತ ಜ್ವಾಲೆಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮ್ಯಾಜಿಕ್‌ನಂತೆ ವಿಲೀನಗೊಳಿಸುವ ಅಪಕ್ವ ಪುನನಿರ್ಮಾಣ ಸಂಕೇತವು ವ್ಯಾಪಕ ಜುಗುಪ್ಸೆಗೆ ಕಾರಣವಾಗಿದೆ. ಸರ್ಜಿಕಲ್ ಸ್ಟ್ರೈಕ್‌ನಂತಹ ನೆಚ್ಚಿನ ತಂತ್ರದ ಈ ಉಪಕ್ರಮಕ್ಕೆ ಸಾರ್ವಜನಿಕರ ಒತ್ತಾಯವಿರಲಿಲ್ಲ ಅಥವಾ ಅವರು ಅದನ್ನು ನಿರೀಕ್ಷಿಸಿರಲಿಲ್ಲ. ಈ ತರ್ಕದ ಬಗ್ಗೆ ನಿಕಟ ಪರಿಶೀಲನೆ ಅಗತ್ಯವಾಗಿದೆ. ಪ್ರಥಮ ವಿಶ್ವಯುದ್ಧದಲ್ಲಿ ಮೃತರಾದವರು ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತವರಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ದೂರದ ದೇಶದಲ್ಲಿ ಅವರು ತೋರಿದ ಶೌರ್ಯ, ವೀರತ್ವವು ಅವರ ಯುದ್ಧ ಸಾಮರ್ಥ್ಯ, ಕೌಶಲ್ಯವನ್ನು ಸಾಬೀತುಪಡಿಸಿದೆ ಮತ್ತು ಇದನ್ನು ಪಂಜಾಬ್ ಮತ್ತಿತರ ಗ್ರಾಮಗಳ ಹಲವು ತಲೆಮಾರಿನವರು ಈಗಲೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಈ ಶೌರ್ಯದ ಸ್ಮಾರಕ ಅಗತ್ಯವಿದೆ ಎಂದು ಬ್ರಿಟಿಷರು ಚಿಂತಿಸಿದಾಗ ಯಾವ ಭಾರತೀಯರೂ ಆಕ್ಷೇಪಿಸಲಿಲ್ಲ(ಅಂದರೆ ಇಲ್ಲಿಯವರೆಗೆ).

ಬಾಂಗ್ಲಾದೇಶದ ಯುದ್ಧಭೂಮಿಯಲ್ಲಿ ಭಾರತದ ಸೇನೆಯ ಅದ್ಭುತ ಗೆಲುವಿನ ಸಂಕೇತವಾಗಿ ವಿಶಿಷ್ಟ ಸ್ಮಾರಕದ ಅಗತ್ಯವಿದೆ ಎಂದು ಇಂದಿರಾ ಗಾಂಧಿಯವರು ಭಾವಿಸಿದ್ದರಲ್ಲೂ ಅರ್ಥವಿದೆ. ಆದರೆ ಈಗ ಕೈಗೊಂಡಿರುವ ವಿಲೀನ ಕಾರ್ಯಕ್ಕೆ ಯಾವುದೇ ಅರ್ಥವಿಲ್ಲ ಮತ್ತು ಇದು ವಿವೇಕರಹಿತ, ಕ್ಷುಲ್ಲಕ ಮಕ್ಕಳಾಟಿಕೆಯ ನಡೆಯಾಗಿದೆ ಮತ್ತು ಈ ಜಾಗದಲ್ಲಿ ನೇತಾಜಿಯವರ ಪ್ರತಿಮೆಯನ್ನು ಸ್ಥಾಪಿಸುವುದು ಘನತೆಯ ಭಾವನೆಗೆ ಧಕ್ಕೆ ತಂದಿರುವ ವಿಲ್ಷಕಣ ನಿರ್ಧಾರವಾಗಿದೆ. ಈ ಮಧ್ಯೆ, ಹಿಂದೂ ಮತಾಂಧ ಗುಂಪುಗಳು ರಸ್ತೆಗಿಳಿದು ತಮ್ಮ ಬಲಪ್ರದರ್ಶನದ ಮತ್ತು ‘ಭೂಮಿ ಜಿಹಾದ್’ನ ಸಂಕೇತವಾಗಿ ಮುಸ್ಲಿಮ್ ಮದರಸ ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ಕೃತ್ಯದಲ್ಲಿ ತೊಡಗಿರುವುದು ಅಧಿಕಾರದ ಅತಿರೇಕದ ಬದಲು ಮತ್ತೊಂದು ಸಂಚಿನ ಮುನ್ಸೂಚನೆಯಾಗಿರುವ ಆತಂಕವಿದೆ ಎಂದು ‘ಸಬ್ರಂಗ್ ಇಂಡಿಯಾ’ ವರದಿ ಮಾಡಿದೆ. ನೂತನ ಚಾರಿತ್ರಿಕ ಸ್ಮಾರಕವನ್ನು ಒಂದೇ ರಾಷ್ಟ್ರ, ಒಂದೇ ಪಂಥ, ಒಂದೇ ನಾಯಕ ಎಂಬ ಅಸ್ತಿತ್ವದಲ್ಲಿದ ಸಿದ್ಧಾಂತದ ಮೇಲೆ, ಈ ಹಿಂದೆ ಜರ್ಮನ್‌ನಲ್ಲಿ ಹಿಟ್ಲರ್‌ನ ಸ್ಮಾರಕದಂತೆ ನಿರ್ಮಿಸಲಾಗುತ್ತದೆ. ಈ ಜನಸಾಂದ್ರತೆಯ ದೇಶವು ಗೊಂದಲರಹಿತ ಮತ್ತು ವೈವಿಧ್ಯತೆಯಿಂದ ದೂರವಾದ ಏಕರೂಪದ ಬಲಿಷ್ಟ ದೇಶವಾಗಲಿದೆ ಎಂದು ಏಕತಾನತೆಯ ದೇಶದ ವಾತಾವರಣವನ್ನು ಆನಂದಿಸುವ ಕೆಲವು ದೊಂಬಿ ಎಬ್ಬಿಸುವ ಗುಂಪುಗಳು ಈ ಉಪಕ್ರಮವನ್ನು ಸ್ವಾಗತಿಸಬಹುದು ಮತ್ತು ಪ್ರಾಚೀನ ಸ್ಮಾರಕ, ಗೌರವಗಳನ್ನು ಒಡೆದು ಹಾಕುವ ಮೂಲಕ ಅವರು ಸಂಭ್ರಮಾಚರಿಸಬಹುದು. ಅವರಿಗಿರುವ ಪ್ರಮುಖ ಉದ್ದೇಶ ಒಂದೇ - ಹೊಸ ದೇಶವನ್ನು ಸ್ಥಾಪಿಸುವುದು, ಬೇರೇನೂ ಇಲ್ಲ. ಇದು ಮುಕ್ತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ, ಶುದ್ಧ ಫ್ಯಾಶಿಸಂ ಉಪಕ್ರಮವಾಗಿದೆ. ಅಂಪೈರ್‌ಗಳಾಗಿ ಕಾರ್ಯನಿರ್ವಹಿಸುವ ನ್ಯಾಯಾಲಯ ಇಲ್ಲದ ಯುದ್ಧರಂಗದಲ್ಲಿ ದೊಂಬಿ ಎಬ್ಬಿಸುವ ಗುಂಪುಗಳನ್ನು ಭೇಟಿಯಾಗಲು ಸಿದ್ಧರಾಗಬೇಕಿದೆ

ಕೃಪೆ: countercurrents.org

Writer - ಹಿರೇನ್ ಗೊಹೈನ್

contributor

Editor - ಹಿರೇನ್ ಗೊಹೈನ್

contributor

Similar News

ಜಗದಗಲ
ಜಗ ದಗಲ