×
Ad

ಉ.ಪ್ರ.ದಲ್ಲಿ ಕಾಂಗ್ರೆಸ್‌ ಗೆ ಹಿನ್ನಡೆ: ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ ಹಿರಿಯ ನಾಯಕ ಆರ್‌ಪಿಎನ್‌ ಸಿಂಗ್

Update: 2022-01-25 15:54 IST

ಲಕ್ನೋ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿರುವ ಮಧ್ಯೆಯೇ ಕಾಂಗ್ರೆಸ್‌ ಪಕ್ಷಕ್ಕೆ ಆಘಾತ ನೀಡುವ ಬೆಳವಣಿಗೆ ನಡೆದಿದೆ. ಉತ್ತರಪ್ರದೇಶ ಕಾಂಗ್ರೆಸ್‌ ನ ಹಿರಿಯ ನಾಯಕ ಆರ್‌ಪಿಎನ್‌ ಸಿಂಗ್‌ ರವರು ಕಾಂಗ್ರೆಸ್‌ ಪಕ್ಷ ತೊರೆದಿದ್ದು, ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿ ರಾಜೀನಾಮೆ ಪತ್ರ ಪ್ರಕಟಿಸಿದ ನಂತರ, ಆರ್‌ಪಿಎನ್ ಸಿಂಗ್ ಅವರು "ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಹೊಸ ಆರಂಭ" ಎಂದು ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಭದ್ರಕೋಟೆಯಾದ ಪದ್ರೌನಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ, ಅಲ್ಲಿಂದ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪೂರ್ವ ಉತ್ತರಪ್ರದೇಶದ ಕುಶಿನಗರದ ಆರ್‌ಪಿಎನ್‌ ಸಿಂಗ್‌ ಕಾಂಗ್ರೆಸ್‌ ನ ರಾಷ್ಟ್ರಮಟ್ಟದ ಪ್ರಭಾವಿ ನಾಯಕರಾಗಿದ್ದು, ನಿನ್ನಯಷ್ಟೇ ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದರು. ಇಂದು ಬೆಳಗ್ಗೆ ಅವರು ತಮ್ಮ ಟ್ವಿಟರ್‌ ಬಯೋವನ್ನು ಬದಲಾಯಿಸಿದ್ದು, ಕಾಂಗ್ರೆಸ್‌ ನೊಂದಿಗಿನ ಎಲ್ಲಾ ನಂಟನ್ನೂ ಅಳಿಸಿ ಹಾಕಿದ್ದಾರೆ. "ನಮ್ಮ ಮಹಾನ್‌ ಗಣರಾಜ್ಯ ರಚನೆಯ ಈ ಸಂದರ್ಭದಲ್ಲಿ ನಾನು ನನ್ನ ರಾಜಕೀಯ ಪಯಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದೇನೆ" ಎಂದ ಅವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಬಿಜೆಪಿ ಪಕ್ಷವನ್ನು ತ್ಯಜಿಸಿದ್ದ ಸ್ವಾಮಿ ಪ್ರಸಾದ್‌ ಮೌರ್ಯ ವಿರುದ್ಧ ಸಿಂಗ್‌ ಸ್ಫರ್ಧಿಸುವ ಸಾಧ್ಯತೆಗಳಿವೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News