×
Ad

ಹೂಡೆ ಸಾಲಿಹಾತ್ ಕಾಲೇಜಿನಲ್ಲಿ ಮತದಾರರ ದಿನಾಚರಣೆ

Update: 2022-01-25 21:38 IST

ಉಡುಪಿ, ಜ. 25: ತೋನ್ಸೆ ಹೂಡೆಯ ಸಾಲಿಹಾತ್ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಮತದಾರರ ದಿನಾಚರಣೆ ಯನ್ನು ಮಂಗಳವಾರ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದ ಅಲೆಯೂರು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಿನೇಶ್ ಕಿಣಿ ಮಾತನಾಡಿ, ಕೇವಲ ಮತದಾನಕ್ಕೆ ನಮ್ಮ ಕರ್ತವ್ಯ ಸೀಮಿತ ವಾಗದೆ, ಸರಕಾರ ತಪ್ಪುಮಾಡಿದಾಗ ಎಚ್ಚೆತ್ತು ಕೊಂಡು ಪ್ರತಿಭಟಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಘನತೆ ಗೌರವ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಈ ಹಿನ್ನಲೆಯಲ್ಲಿ ಮತದಾನ ದಿನಾಚರಣೆ ಮಹತ್ವವನ್ನು ಸಮಾಜದ ಇತರರಿಗೆ ತಲುಪಿಸುವ ಕಾರ್ಯ ವಿದ್ಯಾರ್ಥಿಗಳು ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಹಿಸಿದ್ದರು.  ವೇದಿಕೆಯಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಅಸ್ಲಂ ಹೈಕಾಡಿ, ಉಪ ಪ್ರಾಂಶು ಪಾಲೆ ಸುಮಯ್ಯ, ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲೆ ದಿವ್ಯ ಪೈ, ಕಾಲೇಜು ವಿದ್ಯಾರ್ಥಿ ನಾಯಕಿ ನಾಜ್ನೀನ್ ಉಪಸ್ಥಿರಿದ್ದರು.

ಆಫಿಯಾ ಮತ್ತು ಮುಜೈನ ಪ್ರಾರ್ಥನೆಗೈದರು. ವಿದ್ಯಾರ್ಥಿನಿ ಆಲಿಯ ಸ್ವಾಗತಿಸಿ ಸಭಾ ವಂದಿಸಿದರು. ಅಲ್ ಸಫ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News