ಕೇಂದ್ರದ ಮಾಜಿ ಸಚಿವ ಜುಯಲ್ ಓರಮ್ ಅನುಚಿತ ವರ್ತನೆ: ಪಕ್ಷದ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತೆ

Update: 2022-01-25 18:03 GMT
Photo: Times of india

ರೂರ್ಕೆಲಾ: ಸುಂದರ್‌ಗಢ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಜುಯಲ್‌ ಓರಮ್‌  ತನ್ನೊಂದಿಗೆ ದೂರವಾಣಿ ಮೂಲಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ  ಯುವ ಬಿಜೆಪಿ ಕಾರ್ಯಕರ್ತೆಯೊಬ್ಬರು ಪಕ್ಷದ ಕಚೇರಿಯನ್ನು ದ್ವಂಸಗೊಳಿಸಿರುವ  ಘಟನೆ ಸೋಮವಾರ ನಡೆದಿದೆ ಎಂದು newindianexpress.com ವರದಿ ಮಾಡಿದೆ

ಮಹಿಳೆ ಗೌರಿ ಮುಂಡರಿ ಎಂಬಾಕೆ  ಪ್ರಶಾಂತ್ ಮಜ್ಹಿ ಸೇರಿದಂತೆ ತನ್ನ ಬೆಂಬಲಿಗರೊಂದಿಗೆ ಮಧ್ಯಾಹ್ನ ಬಿಜೆಪಿ ಕಚೇರಿಗೆ ಆಗಮಿಸಿ ಕಿಟಕಿ ಗಾಜುಗಳನ್ನು ಪುಡಗಟ್ಟಿದರು. ರೂರ್ಕೆಲಾ ಸ್ಟೀಲ್ ಪ್ಲಾಂಟ್ (ಆರ್ ಎಸ್ ಪಿ) ನ ಸೆಕ್ಟರ್ -3 ನಲ್ಲಿರುವ ಬಿ-33 ಕ್ವಾರ್ಟರ್ಸ್ ಅನ್ನು ಅಧಿಕೃತವಾಗಿ ಜುಯಲ್ ಗೆ ಹಂಚಿಕೆ ಮಾಡಲಾಗಿದೆ ಹಾಗೂ  ಇದನ್ನು ಬಿಜೆಪಿ ಕಚೇರಿಯಾಗಿ ಬಳಸಲಾಗಿದೆ.

"ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚಿಸಲು ಜುಯಲ್ ಗೆ ನಾನು ಕರೆ ಮಾಡಿದ್ದೆ.  ಆದರೆ ಸಂಸದರು ತನ್ನನ್ನು ನಿಂದಿಸಿದಾಗ ಆಘಾತಕ್ಕೊಳಗಾದೆ.  ಇನ್ನೊಂದು ಬದಿಯಲ್ಲಿದ್ದ ಇನ್ನೊಬ್ಬ ಮಹಿಳೆ ಫೋನ್ ತೆಗೆದುಕೊಂಡು ಜುಯಲ್ ಮದ್ಯ ಸೇವಿಸಿದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿ ಸಮಾಧಾನಪಡಿಸಲು ಪ್ರಯತ್ನಿಸಿದಳು'' ಎಂದು ಗೌರಿ ಹೇಳಿದ್ದಾರೆ.

“ಬಿಜೆಪಿ ಸಂಸದರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು  ಸಹೋದರಿಯರು ಹಾಗೂ  ತಾಯಂದಿರನ್ನು ಗೌರವಿಸುವುದನ್ನು ಕಲಿಯಬೇಕು. ನಾನು ಇತರ ಮಹಿಳೆಯರಿಂದ ಇದೇ ರೀತಿಯ ದೂರುಗಳನ್ನು ಕೇಳಿದ್ದೇನೆ.  ಆದರೆ ಅವರು ನನ್ನೊಂದಿಗೂ ಹಾಗೆ ಮಾಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ನಾನು ಅವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ'' ಎಂದು ಗೌರಿ ಹೇಳಿದ್ದಾರೆ.

""ಬಿಸ್ರಾ-ಎ ಜಿಲ್ಲಾ ಪರಿಷತ್ ಸ್ಥಾನದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಗೌರಿ ಉದ್ದೇಶಪೂರ್ವಕವಾಗಿ ಈ ದೃಶ್ಯವನ್ನು ಸೃಷ್ಟಿಸಿದ್ದಾರೆ ಎಂದು ಬಿಜೆಪಿಯ ಪನ್ಪೋಶ್ ಸಾಂಸ್ಥಿಕ ಜಿಲ್ಲಾಧ್ಯಕ್ಷೆ ಲತಿಕಾ ಪಟ್ನಾಯಕ್ ಹೇಳಿದರು. 

ಗೌರಿ 2018 ರಲ್ಲಿ ಪಕ್ಷಕ್ಕೆ ಸೇರಿದ್ದರು ಹಾಗೂ  ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಸದರ ಪ್ರತಿನಿಧಿಯಾಗಿದ್ದರು ತನ್ನ ಬೆಂಬಲಿಗರ ಸಹಾಯದಿಂದ  ನುಗಾಂವ್ ಬ್ಲಾಕ್‌ನಲ್ಲಿ ಒಂದೆರಡು ಸರಪಂಚ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಬಿಜೆಪಿಯ ಆಂತರಿಕ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News