ತೊಂಗಾ ದೇಶಕ್ಕೆ 2 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ ಭಾರತ

Update: 2022-01-25 18:18 GMT
photo:twitter

ನುಕುವಲೋಫ, ಜ.25: ಸುನಾಮಿ ವಿಪತ್ತಿನಿಂದ ಜರ್ಝರಿತಗೊಂಡಿರುವ ತೊಂಗ ದೇಶಕ್ಕೆ ಪರಿಹಾರ, ಪುನರ್ವಸತಿ ಮತ್ತು ಪುನನಿರ್ಮಾಣ ಕಾರ್ಯವನ್ನು ಬೆಂಬಲಿಸಲು 2 ಲಕ್ಷ ಡಾಲರ್ ತುರ್ತು ನೆರವು ಒದಗಿಸುವುದಾಗಿ ಭಾರತ ಸರಕಾರ ಘೋಷಿಸಿದೆ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಓರ್ವ ಸ್ನೇಹಿತನಾಗಿ ಮತ್ತು ಫಾರಂ ಫಾರ್ ಇಂಡಿಯಾ ಪೆಸಿಫಿಕ್ ಐಲ್ಯಾಂಡ್ಸ್ ಕೊಆಪರೇಷನ್(ಎಫ್ಐಐಸಿ)ಯ ಪಾಲುದಾರನಾಗಿ ಮತ್ತು ತೋಂಗಾದ ಸ್ನೇಹಮಯಿ ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ, ಭಾರತ ಸರಕಾರವು ತೊಂಗ ದೇಶದ ಪರಿಹಾರ, ಪುನರ್ವಸತಿ ಮತ್ತು ಪುನನಿರ್ಮಾಣ ಪ್ರಯತ್ನಗಳಿಗೆ 2 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ತುರ್ತು ನೆರವು ಒದಗಿಸಲಿದೆ. ಅಲ್ಲದೆ ಸುನಾಮಿ ವಿಪತ್ತಿನಿಂದ ದೇಶದ ಜನತೆ ಎದುರಿಸಿದ ಸಂಕಷ್ಟ ಮತ್ತು ಹಾನಿಗೆ ಸಂತಾಪ ಸೂಚಿಸುತ್ತದೆ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ.

2022ರ ಜನವರಿ 15ರಂದು ತೊಂಗಾ ದೇಶಕ್ಕೆ ಸುನಾಮಿ ಅಪ್ಪಳಿಸಿ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News