ನೀರುಮಾರ್ಗ: ನಾರಾಯಣಗುರು ವೃತ್ತಕ್ಕೆ ಶಿಲಾನ್ಯಾಸ

Update: 2022-01-26 08:27 GMT

ಮಂಗಳೂರು, ಜ.26: ನೀರುಮಾರ್ಗ ಗ್ರಾಮ ಪಂಚಾಯಿತಿಯಿಂದ ನೀರುಮಾರ್ಗ ಜಂಕ್ಷನ್‌ನಲ್ಲಿ ನಿರ್ಮಾಣವಾಗಲಿರುವ ನೂತನ ನಾರಾಯಣಗುರು ವೃತ್ತಕ್ಕೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನಾರಾಯಣ ಗುರುಗಳ ಪ್ರತಿಕೃತಿ ನಿರಾಕರಣೆ ಮೂಲಕ ಕೇಂದ್ರ ಸರಕಾರ ಗುರುಗಳಿಗೆ ಅವಮಾನ ಮಾಡಿದೆ. ಈ ಹಿನ್ನಲೆಯಲ್ಲಿ ನಾರಾಯಣಗುರು ಅಭಿಮಾನಿಗಳು ಜಿಲ್ಲೆಯಾದ್ಯಂತ ಜಾಥಾ ನಡೆಸುತ್ತಿದ್ದು, ಈ ಸುಸಂದರ್ಭ ನೀರುಮಾರ್ಗದಲ್ಲಿ ವೃತ್ತಕ್ಕೆ ಪಂಚಾಯಿತಿ ನಿರ್ಧರಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭ ಮಾಜಿ ಶಾಸಕರ ಮೊಯಿದ್ದೀನ್ ಬಾವ, ಜೆ.ಆರ್. ಲೋಬೋ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ನೀರುಮಾರ್ಗ ಗ್ರಾ.ಪಂ. ಅಧ್ಯಕ್ಷೆ ಧನವಂತಿ, ಉಪಾಧ್ಯಕ್ಷೆ ಯಶೋದಾ, ಮಾಜಿ ಮೇಯರ್ ಭಾಸ್ಕರ್ ಕೆ., ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್‌ದಾಸ್, ನೀರುಮಾರ್ಗ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಉದಯ ಕುಡುಪು, ಕಾಂಗ್ರೆಸ್ ಮುಖಂಡರಾದ ಸುಬೋದಯ ಆಳ್ವ, ಅನಿಲ್ ಪೂಜಾರಿ, ಪ್ರಕಾಶ್ ಸಾಲ್ಯಾನ್, ಗಿರೀಶ್ ಆಳ್ವ, ಕೃಷ್ಣಪ್ಪ ಅಮೀನ್, ಸುರೇಂದ್ರ ಕಂಬ್ಳಿ, ಟಿ.ಕೆ. ಸುಧೀರ್, ನೀರುಮಾರ್ಗ ಗ್ರಾಮ ಪಂ. ಸದಸ್ಯರಾದ ಭಾಸ್ಕರ್ ಕೆ., ರೋಹಿತ್, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News