ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Update: 2022-01-26 11:11 GMT

ಮಂಗಳೂರು : ಸಂವಿಧಾನದ ಮೂಲಭೂತ ಹಕ್ಕುಗಳನ್ನು ಅನುಭವಿಸುವಂತೆ, ಪ್ರಜೆಗಳಾದ ನಾವು ನಿರ್ವಹಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಕೂಡ ಪಾಲಿಸಿ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಕೃಷ್ಣಾಪುರದ ಅಲ್ ಬದ್ರಿಯಾ ಪಿ.ಯು. ಕಾಲೇಜು ಮತ್ತು ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಬಿ.ಎ.ನಝೀರ್ ರವರು ಕರೆ ನೀಡಿದರು.

ಅವರು ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಝಾಕೀರ್, ಕಾರ್ಯದರ್ಶಿ ಅನ್ಸಾರ್, ಕೋಶಾಧಿಕಾರಿ ಶೌಕತ್, ಬದ್ರಿಯಾ ಜುಮಾ ಮಸೀದಿಯ ಲೆಕ್ಕ ಪರಿಶೋಧಕ ಆಶಿಕ್, ಮಾಜಿ ಸಂಚಾಲಕರಾದ ಬಿ.ಎ. ಇಕ್ಬಾಲ್, ಪ್ರಾಂಶುಪಾಲೆ ವಿಲ್ಮಾ ಡಿ’ಮೆಲ್ಲೊ,  ಮುಖ್ಯ ಶಿಕ್ಷಕ ಸತೀಶ ಎನ್. ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಮುಸ್ತಾಫರನ್ನು ಈ  ಸಂದರ್ಭದಲ್ಲಿ ಅಭಿನಂದಿಸಲಾಯಿತು. ಫಸೀಲಾ ಸ್ವಾಗತಿಸಿ, ಸುಹಾನ ವಂದಿಸಿದರು. ಸುಹೈಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News