ಗಣರಾಜೋತ್ಸವ ಆಚರಿಸದ ಬಾರ್ಯ ಗ್ರಾ.ಪಂ !

Update: 2022-01-26 17:01 GMT

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಧ್ವಜಾರೋಹಣ ಮಾಡದೆ ಗಣರಾಜ್ಯೋತ್ಸವವನ್ನು ಕಡೆಗಣಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಎಲ್ಲೆಡೆ ಗಣರಾಜ್ಯೋತ್ಸವವನ್ನು ಸ್ಥಳೀಯಾಡಳಿತ ಕೇಂದ್ರಗಳಲ್ಲಿ ಬದ್ಧತೆಯಿಂದ ಆಚರಿಸುತ್ತಿದ್ದರೆ, ಬಾರ್ಯ ಗ್ರಾಮ ಪಂಚಾಯತ್ ಆಡಳಿತ ಮಾತ್ರ ಗಣರಾಜ್ಯೋತ್ಸವಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ  ಬಯಸಿ ಪಂಚಾಯತ್ ಅಧ್ಯಕ್ಷೆ ಉಷಾ ಶರತ್ ರವರನ್ನು ಸಂಪರ್ಕಿಸಿದಾಗ ನನಗೆ ಇಲ್ಲಿ ಗಣರಾಜ್ಯೋತ್ಸವದ ಬಾಬ್ತು ಧ್ವಜಾರೋಹಣಗೈಯುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮಾತ್ರವಲ್ಲದೆ ಪಂಚಾಯತ್ ಪಿಡಿಒ ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಕಳೆದ ವರ್ಷವೂ ಗಣರಾಜ್ಯೋತ್ಸವ ಆಚರಣೆ ನಡೆದಿಲ್ಲ ಎಂಬ ಮಾಹಿತಿ ಇತ್ತು. ಹಾಗಾಗಿ ಈ ಬಾರಿಯೂ ಧ್ವಜಾರೋಹಣ ನಡೆಸಲಿಲ್ಲ ಎಂದು ತಿಳಿಸಿದ್ದಾರೆ.

ಸತತ ಪ್ರಯತ್ನ ನಡೆಸಿದರೂ ಪಂಚಾಯತ್ ಪಿಡಿಒ ದೂರವಾಣಿ ಸಂಕರ್ಕಕ್ಕೆ ಲಭಿಸಿಲ್ಲವಾದರೂ, ಪಂಚಾಯತ್ ಉಪಾಧ್ಯಕ್ಷ ಉಸ್ಮಾನ್ ಪ್ರತಿಕ್ರಿಯೆ ನೀಡಿ, ಕೋರೋನ ಭೀತಿಯಿಂದ ನಾವೆಲ್ಲರೂ ಪಂಚಾಯತ್ ಕಚೇರಿಗೆ ಹೋಗಿಲ್ಲ. ನಮ್ಮ ಗ್ರಾಮದಲ್ಲಿ ಬಹುತೇಕ ಮಂದಿ ಶೀತ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಿಲ್ಲ ಎಂದಿದ್ದಾರೆ.

ಒಟ್ಟಾರೆ ಗಣರಾಜ್ಯೋತ್ಸವದ ಬಗ್ಗೆ ಸ್ಥಳೀಯಾಡಳಿತ ಪಾಲಿಸಬೇಕಾದ ಬದ್ಧತೆಯನ್ನು ಬಾರ್ಯ ಗ್ರಾಮ ಪಂಚಾಯತ್ ಆಡಳಿತ ತೋರದಿರುವುದು ನಾಗರಿಕ ಆಕ್ರೋಶಕ್ಕೆ ಕಾರಣವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News