ದ.ಕ.ಜಿಲ್ಲೆ: ಕೋವಿಡ್‌ಗೆ ನಾಲ್ವರು ಬಲಿ; 888 ಮಂದಿಗೆ ಕೊರೋನ ಸೋಂಕು

Update: 2022-01-26 17:09 GMT

ಮಂಗಳೂರು, ಜ.26: ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ಗೆ ಮತ್ತೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್‌ಗೆ ದ.ಕ. ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 1,731ಕ್ಕೇರಿದೆ.

ಬುಧವಾರ ಮೃತಪಟ್ಟ ನಾಲ್ಕು ಮಂದಿಯ ಪೈಕಿ ಮಂಗಳೂರು ತಾಲೂಕಿನ ಮೂವರು ಮತ್ತು ಬೆಳ್ತಂಗಡಿ ತಾಲೂಕಿನ ಒಬ್ಬರು ಸೇರಿದ್ದಾರೆ. ಅದರಲ್ಲಿ ತಲಾ ಇಬ್ಬರು ಪುರುಷ ಮತ್ತು ಮಹಿಳೆಯರು ಸೇರಿದ್ದಾರೆ.

ಬುಧವಾರ 888 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.09.42 ದಾಖಲಾಗಿದೆ. ಅಲ್ಲದೆ 904 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,29,934 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,22,878 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 5,325 ಸಕ್ರಿಯ ಪ್ರಕರಣವಿದೆ.

ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ಬುಧವಾರ 3 ಕ್ಲಷ್ಟರ್ ವಲಯವನ್ನು ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಸರಕಾರಿ ಶಾಲೆಯೊಂದರ 88 ವಿದ್ಯಾರ್ಥಿಗಳ ಪೈಕಿ 7 ಮಂದಿ ಯಲ್ಲಿ ಮತ್ತು ತಾಲೂಕಿನ ಇನ್ನೊಂದೆಡೆ ಪರೀಕ್ಷೆ ನಡೆಸಲಾದ 6 ಮಂದಿಯಲ್ಲಿ ಕೂಡ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ತಾಲೂಕಿನ ಕಾಲೇಜು ಹಾಸ್ಟೆಲೊಂದರ 75 ಮಂದಿಯ ಪೈಕಿ 18 ವರ್ಷ ಪ್ರಾಯದ 17 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿವೆ.

ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 94,246 ಪ್ರಕರಣ ದಾಖಲಿಸಿ, 1,14,00,980 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News