×
Ad

ಇಂಗ್ಲೆಂಡಿನಲ್ಲಿ ಒಮೈಕ್ರಾನ್ ಉಪರೂಪಾಂತರದ 400ಕ್ಕೂ ಅಧಿಕ ಪ್ರಕರಣ ಪತ್ತೆ

Update: 2022-01-26 23:37 IST
ಸಾಂದರ್ಭಿಕ ಚಿತ್ರ

ಲಂಡನ್, ಜ.26: ಬ್ರಿಟನ್‌ನಲ್ಲಿ ಇತ್ತೀಚೆಗೆ ಪತ್ತೆಯಾದ ಒಮೈಕ್ರಾನ್‌ನ ಉಪರೂಪಾಂತರ ಕೊರೋನ ವೈರಸ್ ಸೋಂಕಿನ ಸಂಭಾವ್ಯ ಪರಿಣಾಮ ಮತ್ತು ಭವಿಷ್ಯದ ಸಾಂಕ್ರಾಮಿಕ ಹರಡುವಿಕೆಯ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದು ಬ್ರಿಟನ್‌ನ ಆರೋಗ್ಯ ಸುರಕ್ಷಾ ಘಟಕ ಹೇಳಿದೆ.

ನೂತನ ರೂಪಾಂತರಿ ಸೋಂಕನ್ನು ಒಮೈಕ್ರಾನ್ ಬಿಎ.2 ಎಂದು ಹೆಸರಿಸಲಾಗಿದ್ದು ಇಂಗ್ಲೆಂಡಿನಲ್ಲಿ 400ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ. ಉಪರೂಪಾಂತರ ಇನ್ನಷ್ಟು ಅತ್ಯಧಿಕ ವೇಗದಲ್ಲಿ ಹರಡುತ್ತಿದೆ. ರವಿವಾರದವರೆಗೆ 426 ಸೋಂಕು ಪ್ರಕರಣ ದಾಖಲಾಗಿದೆ. ಭಾರತ, ಡೆನ್ಮಾರ್ಕ್ ಮತ್ತು ಸ್ವೀಡನ್ ಸಹಿತ ಇತರ 40 ದೇಶಗಳಲ್ಲೂ ಈ ಉಪರೂಪಾಂತರ ಹರಡಿದೆ ಎಂದು ಆರೋಗ್ಯ ಸುರಕ್ಷಾ ಘಟಕ ಹೇಳಿದೆ.

ಈ ಮಧ್ಯೆ, ಭಾರತದಲ್ಲಿ ದಾಖಲಾಗಿರುವ ಬಹುತೇಕ ಒಮೈಕ್ರಾನ್ ಸೋಂಕು ಪ್ರಕರಣ ಸೌಮ್ಯ ಲಕ್ಷಣ ಹೊಂದಿದ್ದರೂ ಆಸ್ಪತ್ರೆಗೆ ಮತ್ತು ತೀವ್ರನಿಗಾ ಘಟಕಕ್ಕೆ ದಾಖಲಾಗುವ ಪ್ರಮಾಣ ಹೆಚ್ಚಿದೆ ಎಂದು ಇಂಡಿಯನ್ ಸಾರ್ಸ್-ಸಿಒವಿ-2-ಜೆನೊಮಿಕ್ಸ್ ಕನ್ಸಾರ್ಟಿಯಮ್(ಐಎನ್ಎಸ್ಎಸಿಒಜಿ) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News