ಉಡುಪಿ: ಆಯುಧ ಪರವಾನಿಗೆ ನವೀಕರಣಕ್ಕೆ ಸೂಚನೆ
Update: 2022-01-27 20:20 IST
ಉಡುಪಿ, ಜ.27:ಜಿಲ್ಲೆಯ ಬಂದೂಕು ಪರವಾನಿಗೆದಾರರು ತಮ್ಮ ಬಂದೂಕು ಪರವಾನಿಗೆಯನ್ನು ನವೀಕರಿಸಲು ವಿಳಂಬವಾಗಿ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬಂದಿದ್ದು, ಶಸ್ತ್ರಾಸ್ತ್ರ ಕಾಯ್ದೆಯ ನಿಯಮದಂತೆ, ಪರವಾನಿಗೆ ನವೀಕರಣಕ್ಕೆ ಪರವಾನಿಗೆ ಅವಧಿ ಮುಕ್ತಾಯಗೊಳ್ಳುವ 60 ದಿನಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.